ಹೊಸದಿಗಂತ ವರದಿ,ಶಿವಮೊಗ್ಗ:
ಅರಸಾಳು ರೈಲ್ವೆ ನಿಲ್ದಾಣದ ಮಾಲ್ಗುಡಿ ಮ್ಯೂಸಿಯಂ ಮುಂಭಾಗ ಕುಮದ್ವತಿ ಕನ್ನಡ ಯುವಕ ಸಂಘ ಹಾಗೂ ಮಾಲ್ಗುಡಿ ಶಂಕರ್ನಾಗ್ ಗೆಳೆಯರ ಬಳಗದ ವತಿಯಿಂದ ಚಿತ್ರನಟ ದಿವಂಗತ ಶಂಕರ್ನಾಗ್ ಅವರ 69ನೇ ಹುಟ್ಟುಹಬ್ಬವನ್ನು ಗುರುವಾರ ಆಚರಿಸಿದರು.
ಅರಸಾಳು ಗ್ರಾಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿದ ಕಾರ್ಯಕರ್ತರು ಭುವನೇಶ್ವರಿ ಭಾವಚಿತ್ರದೊಂದಿಗೆ ಮೆರವಣಿಗೆ ಸಾಗಿ ಮ್ಯೂಸಿಯಂನಲ್ಲಿ ಶಂಕರ್ನಾಗ್ ಭಾವಚಿತ್ರಕ್ಕೆ ದೀಪಬೆಳಗಿಸಿ ನುಡಿನಮನ ಸಲ್ಲಿಸಿದರು.
ಈ ಸಂದರ್ಭರಲ್ಲಿ ಮುಖ್ಯಶಿಕ್ಷಕ ತಿಮ್ಮಪ್ಪ ಮಾತನಾಡಿ, ಕಡಲತಡಿಯ ಗ್ರಾಮೀಣ ಪ್ರದೇಶದ ಯುವಕನೊಬ್ಬ ತನ್ನ ಸ್ವಂತ ಶ್ರಮದಿಂದ ಕಡಿಮೆ ಅವಯಲ್ಲಿ ನಟನೆಯ ಮೂಲಕ ರಾಜ್ಯದ ಜನರ ಮನಗೆದ್ದು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ಶ್ರಮಜೀವಿಯಾದ ಶಂಕರ್ನಾಗ್ ಕಲಾರಂಗದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆಯನ್ನು ಮಾಡಿದ್ದು ಚಿಕ್ಕವಯಸ್ಸಿನಲ್ಲಿಯೇ ಕನ್ನಡ ಜನತೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಲೋಕೇಶ್, ಗ್ರಾಪಂ ಸದಸ್ಯ ಅರುಣ್ಕುಮಾರ್, ಮುಖಂಡರುಗಳಾದ ಸತೀಶ್ ಹೆಗಡೆ, ನಾಗೇಂದ್ರ, ಜಯರಾಜ್, ದಿನೇಶ್, ರಾಜೋಜಿರಾವ್, ನಟರಾಜ, ಗಾಯಿತ್ರಿ, ಪಿಯುಸ್ ರೋಢ್ರಿಗಸ್, ಸುರೇಶ ಶೆಟ್ಟಿ, ಪಕೀರಪ್ಪ, ಗೋಪಿನಾಥ್, ಸಾದಿಕ್ ಹುಸೇನ್ ಇನ್ನಿತರರಿದ್ದರು.