ಹೊಸದಿಗಂತ ಡಿಜಿಟಲ್ ಡೆಸ್ಕ್ :
26ನೇ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಭದ್ರತಾ ವೈಫಲ್ಯವುಂಟಾದ ಘಟನೆ ನಡೆದಿದೆ.
ಹುಬ್ಬಳ್ಳಿಯ ಏರ್ ಪೋರ್ಟ್ ನಿಂದ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮೂಲಕವಾಗಿ ರೈಲ್ವೆ ಮೈದಾನಕ್ಕೆ ಸಾಗಿದ್ದು, ಸುಮಾರು 8 ಕಿ.ಮೀ ವರೆಗೆ ರೂಡ್ ಶೋನಲ್ಲಿ ಭಾಗಿಯಾಗಿದ್ದಾರೆ.
ರೋಡ್ ಶೋ ವೇಳೆ ಯುವಕನೊಬ್ಬ ಬ್ಯಾರಿಕೇಡ್ ಗಳನ್ನು ಹಾರಿ, ಕೈಯಲ್ಲಿ ಹಾರ ಹಿಡಿದು ಪ್ರಧಾನಿ ಮೋದಿಯತ್ತ ಧಾವಿಸಿ ಬಂದಿದ್ದಾನೆ.
ಪ್ರಧಾನಿ ಮೋದಿಯವರಿಗೆ ಖುದ್ದು ಹಾರ ಹಾಕುವ ನಿಟ್ಟಿನಲ್ಲಿ ಯತ್ನಿಸಿದ್ದಾನೆ. ಕ್ಷಣಾರ್ಧದಲ್ಲಿ ಭದ್ರತಾ ಸಿಬ್ಬಂದಿಗಳು ಯುವಕನನ್ನು ತಡೆದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಯುವಕನನ್ನು ವಶಕ್ಕೆ ಪಡೆಡಿದ್ದಾರೆ.