ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಮೂಲಕ ಜೊತೆಯಾದ ಸಾನ್ಯಾ (Sanya Iyer) ಮತ್ತು ರೂಪೇಶ್ ಶೆಟ್ಟಿ (Roopesh shetty) ಇದೀಗ ಶೋ ಬಳಿಕವೂ ತಮ್ಮ ಸ್ನೇಹವನ್ನು ಮುಂದುವರಿಸಿದ್ದು, ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆರು ಮೀಟ್ ಫೋಟೋ ವೈರಲ್ ಆಗುತ್ತಿದೆ.
ಒಟಿಟಿಯಿಂದ ಟಿವಿ ಬಿಗ್ ಬಾಸ್ವರೆಗೂ ಸಾನ್ಯಾ ಮತ್ತು ರೂಪೇಶ್ ಶೆಟ್ಟಿ ಒಬ್ಬರಿಗೊಬ್ಬರು ಜೊತೆಯಾಗಿದ್ದರು. ದೊಡ್ಮನೆಯಲ್ಲಿ ಸಾನ್ಯಾಎಲಿಮಿನೇಷನ್ ಆದಾಗ ರೂಪೇಶ್ ಶೆಟ್ಟಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇದೀಗ ಶೋ ಬಳಿಕ ಈ ಜೋಡಿ ಮತ್ತೆ ಜೊತೆಯಾಗಿದ್ದಾರೆ.
ದೊಡ್ಮನೆಯ ಆಟದ ನಂತರ ಸಾಲು ಸಾಲು ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದ ರೂಪೇಶ್ ಇದೀಗ ಕೊಂಚ ಬಿಡುವು ಮಾಡಿಕೊಂಡು ಸಾನ್ಯಾ ಅವರನ್ನು ಭೇಟಿಯಾಗಿದ್ದಾರೆ. ಒಟ್ಟಿಗೆ ಕಾಫಿ ಕುಡಿದು, ಸಮಯ ಕಳೆದಿದ್ದಾರೆ.