ಹೊಸದಿಗಂತ ಡಿಜಿಟಲ್ ಡೆಸ್ಕ್:
2016 ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮತ್ತು ಚಲನಚಿತ್ರ ನಿರ್ಮಾಪಕ ಕಮಾಲ್ ರಶೀದ್ ಖಾನ್ ಅವರನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಡಿಸೆಂಬರ್ 25, ಸೋಮವಾರದಂದು ಖಾನ್ ತಮ್ಮ X (ಟ್ವಿಟ್ಟರ್) ಹ್ಯಾಂಡಲ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನಾನು ಜೈಲಿನಲ್ಲಿ ಸತ್ತರೆ ಅದು ಕೊಲೆ ಎಂದು ನೀವು ತಿಳಿದುಕೊಳ್ಳಬೇಕು ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಕೆಆರ್‌ಕೆ (KRK)ಎಂದು ಕರೆಯಲ್ಪಡುವ ಕಮಾಲ್ ರಷೀದ್ ಖಾನ್ (Kamaal Rashid Khan) ಹೆಸರು ಸಿನಿಮಾವಲಯದಲ್ಲಿ ಅಷ್ಟೇನೂ ಚಾಲ್ತಿಯಲ್ಲಿ ಇಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರು ಸಖತ್ ಫೇಮಸ್ ಎನ್ನಬಹುದು. ಕಾರಣ, ಆಗಾಗ ಅವರನ್ನು ಎಫ್‌ಐಆರ್ ಹಾಕಿ ಮುಂಬೈ ಪೊಲೀಸರು ಬಂಧಿಸುವುದು, ಬಿಡುಗಡೆ ಮಾಡುವುದು ನಡೆಯುತ್ತಲೇ ಇರುತ್ತದೆ. ಆದರೆ ಈಗ ಮತ್ತೆ ಕೆಆರ್‌ಕೆ ಬಂಧನವಾಗಿದೆ. .
ಕಮಾಲ್ ರಷೀದ್ ಖಾನ್ ಹೇಳುವ ಪ್ರಕಾರ, ‘ನಾನು ಕಳೆದ ಒಂದು ವರ್ಷದಂದ ಮುಂಬೈನಲ್ಲೇ ವಾಸವಾಗಿದ್ದೇನೆ. ನಾನು ನನ್ನ ಎಲ್ಲಾ ಕೋರ್ಟ್‌ಗಳ ವಾಯಿದೆ ದಿನಾಂಕಗಳಲ್ಲಿ ನಾನು ತಪ್ಪದೇ ಹಾಜರಿ ಹಾಕುತ್ತಿದ್ದೇನೆ. ಇಂದು ನಾನು ಹೊಸ ವರ್ಷದ ಆಚರಣೆ ಮಾಡಲು ದುಬೈಗೆ ಹೊರಟಿದ್ದೆ. ಆದರೆ, ನನ್ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅವರ ಪ್ರಕಾರ 2016 ಕೇಸ್‌ಗೆ ಸಂಬಂಧಿಸಿ ನನ್ನ ವಿಚಾರಣೆ ಮಾಡಲು ಅರೆಸ್ಟ್ ಮಾಡಲಾಗಿದೆ. ಆದರೆ, ಸಲ್ಮಾನ್ ಖಾನ್ (Salman Khan) ‘ಟೈಗರ್ 3′ (Tiger 3) ಚಿತ್ರದ ಸೋಲಿಗೆ ನಾನು ಕಾರಣ ಎನ್ನುತ್ತಿದ್ದಾರೆ. ಒಮ್ಮೆ ನಾನು ಪೊಲೀಸ್ ವಿಚಾರಣೆಯಲ್ಲಿ ಅಥವಾ ಜೈಲಿನಲ್ಲಿ ಸತ್ತರೆ ಅದು ಕೊಲೆ (Murder) ಮತ್ತು ಅದಕ್ಕೆ ಯಾರು ಜವಾಬ್ದಾರಿ ಎಂದು ನೀವೆಲ್ಲರೂ ಅರಿತಿರಬೇಕು’ ಎಂದು ಕೆಆರ್‌ಕೆ ಟ್ವೀಟ್ ಮಾಡಿದ್ದಾರೆ.