ʼಸೂಕ್ಷ್ಮವಾಗಿರಿʼ: ಗ್ರಾಹಕರ ಕುಂದುಕೊರತೆಗಳನ್ನು ನಿರ್ವಹಿಸುವ ಓಂಬುಡ್ಸ್‌ಮನ್‌ಗಳಿಗೆ ಆರ್‌ಬಿಐ ಗವರ್ನರ್‌ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಡಿಜಿಟಲ್ ಸಾಲ ಅಥವಾ ಹಣಕಾಸು ತಂತ್ರಜ್ಞಾನ-ಸಂಬಂಧಿತ ವಿಷಯಗಳ ವಿಷಯದಲ್ಲಿ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸುವಾಗ ತಮ್ಮ ವಿಧಾನದಲ್ಲಿ ಸಂವೇದನಾಶೀಲರಾಗಿರಬೇಕು ಎಂದು ಒಂಬುಡ್ಸ್‌ಮೆನ್‌(ವ್ಯಕ್ತಿಗಳ ದೂರುಗಳನ್ನು ತನಿಖೆ ಮಾಡಲು ನೇಮಕಗೊಂಡ ಅಧಿಕಾರಿ) ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಒತ್ತಾಯಿಸಿದ್ದಾರೆ.

ಜೋಧ್‌ಪುರದಲ್ಲಿ ಆರ್‌ಬಿಐ ಒಂಬುಡ್ಸ್‌ಮನ್‌ಗಳ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಗವರ್ನರ್‌ ಶಕ್ತಿಕಾಂತ್‌ ದಾಸ್, ಗ್ರಾಹಕರ ದೂರುಗಳ ಮೂಲ ಕಾರಣಗಳನ್ನು ಮೊದಲು ಗುರುತಿಸಲು ಮತ್ತು ನಂತರ ಅವುಗಳನ್ನು ಸರಿಪಡಿಸಲು ಅಗತ್ಯವಾದ ವ್ಯವಸ್ಥಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಬ್ಯಾಂಕ್‌ನ ಓಂಬುಡ್ಸ್‌ಮನ್‌ಗಳು ಮತ್ತು ನಿಯಂತ್ರಿತ ಅಧಿಕಾರಿಗಳಿಗೆ ಕರೆ ನೀಡಿದರು. ಓಂಬುಡ್ಸ್‌ಮನ್‌ಗಳಿಂದ ಗ್ರಾಹಕರ ದೂರುಗಳ ಪರಿಹಾರವು ನ್ಯಾಯಯುತ ಮತ್ತು ತ್ವರಿತವಾಗಿರಬೇಕು ಎಂದು ಅವರು ಹೇಳಿದರು

ತಪ್ಪಾದ ಮಾರಾಟ, ಪಾರದರ್ಶಕ ಬೆಲೆಯ ಕೊರತೆ, ಅನುಪಾತವಿಲ್ಲದ ಸೇವಾ ಶುಲ್ಕಗಳು, ಹೆಚ್ಚಿನ ದಂಡದ ದರಗಳು ಮುಂತಾದ ಕ್ಷೇತ್ರಗಳಲ್ಲಿನ ನಿರಂತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ ದಾಸ್‌ ರಿಕವರಿ ಏಜೆಂಟ್‌ ಗಳು ತೋಳ್ಬಲ ತಂತ್ರಗಳನ್ನು ಪ್ರದರ್ಶಿಸುತ್ತಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಕಥೆಗಳು  RBI ಮೂಲಕ ಗ್ರಾಹಕರ ರಕ್ಷಣೆಗಾಗಿ ಮಾಡಿದ ಒಳ್ಳೆಯ ಕೆಲಸವನ್ನು ಮರೆಮಾಡುತ್ತಿವೆ ಎಂದು ಹೇಳಿದರು.

ಹೆಚ್ಚಿನ ಸಂಖ್ಯೆಯ ದೂರುಗಳು  ಗ್ರಾಹಕ ಸೇವೆ ಮತ್ತು ನಿಯಂತ್ರಿತ ಘಟಕಗಳಲ್ಲಿನ ಕುಂದುಕೊರತೆ ಪರಿಹಾರ ಕಾರ್ಯವಿಧಾನದಲ್ಲಿ ಗಂಭೀರ ಪರಿಶೀಲನೆ ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ. ನಿರಂತರ ಕುಂದುಕೊರತೆಗಳ ಮೂಲ ಕಾರಣಗಳನ್ನು ವಿಶ್ಲೇಷಿಸುವ ಅಗತ್ಯವಿದೆ ಮತ್ತು ಅಗತ್ಯ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು ಎಂದು ಸುದ್ದಿ ಸಂಸ್ಥೆ ಏಎನ್‌ಐ ವರದಿ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!