ಅಕ್ಟೋಬರ್ 21ರಂದು ಮಾನವಸಹಿತ ‘ಗಗನಯಾನ’​ದ ಮೊದಲ ಹಾರಾಟ ಪರೀಕ್ಷೆ: ಇಸ್ರೋ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚಂದ್ರಯಾನ, ಸೂರ್ಯಯಾನ ಯೋಜನೆಗಳ ಯಶಸ್ಸಿನ ಮೂಲಕ ನಭೋಮಂಡಲದಲ್ಲಿ ಇತಿಹಾಸ ನಿರ್ಮಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಮತ್ತೊಂದು ಯೋಜನೆಗೆ ಸಜ್ಜಾಗುತ್ತಿದ್ದು, ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮಾನವಸಹಿತ ಗಗನಯಾನ ಮಿಷನ್‌ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಅ. 21 ರಂದು ನಡೆಸಲಿದೆ ಎಂದು ಸೋಮವಾರ ತಿಳಿಸಿದೆ.

ಟಿವಿ-ಡಿ1 ಪರೀಕ್ಷಾ ಹಾರಾಟವನ್ನು ಅಕ್ಟೋಬರ್ 21 ರಂದು ಶ್ರೀಹರಿಕೋಟಾದ ಎಸ್‌ಡಿಎಸ್‌ಸಿ-ಎಸ್​ಎಚ್​ಎಆರ್​ನಿಂದ ಬೆಳಿಗ್ಗೆ 7 ರಿಂದ 9 ರವರೆಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಮೂವರು ಗಗನಯಾತ್ರಿಗಳು ಹಾರಾಟ ನಡೆಸಲಿದ್ದಾರೆ ಎಂದು ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.

2024 ರ ಅಂತ್ಯದ ವೇಳೆಗೆ ಮೂವರು ಗಗನಯಾತ್ರಿಗಳನ್ನು ಕಡಿಮೆ ಭೂಮಿಯ ಕಕ್ಷೆಗೆ ಸೇರಿಸುವ ಪ್ರಯತ್ನದ ಭಾಗವಾಗಿರುವ ಈ ಉಡಾವಣೆ ಮಹತ್ವದ್ದಾಗಿದೆ. ಪರೀಕ್ಷಾ ಹಾರಾಟವು ಕ್ಯಾಪ್ಸುಲ್‌ ಮಾಡ್ಯೂಲ್​ನಲ್ಲಿನ ಒತ್ತಡ ತಗ್ಗಿಸುವ ವ್ಯವಸ್ಥೆಯ ಪರೀಕ್ಷೆ ನಡೆಸಲಾಗುವುದು ಎಂದು ಇಸ್ರೋ ತಿಳಿಸಿದೆ.

ಗಗನಯಾನ ಯೋಜನೆಯ ನಾಲ್ಕು ಪರೀಕ್ಷಾರ್ಥ ಪ್ರಯೋಗಗಳ ನಡೆಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಸೋಮನಾಥ್​ ತಿಳಿಸಿದ್ದರು. ಅಕ್ಟೋಬರ್​ 21 ರಂದು ಟಿವಿ-ಡಿ1ನ ಮೊದಲ ಹಾರಾಟ ಪ್ರಯೋಗ ನಡೆಯಲಿದೆ. ಇದಾದ ಬಳಿಕ ಟಿವಿ-ಡಿ2 , ಟಿವಿ-ಡಿ3 ಮತ್ತು ಟಿವಿ-ಡಿ4 ಇನ್ನೂ ಮೂರು ಪ್ರಯೋಗಗಳು ನಡೆಯಲಿವೆ.

ಘನ, ದ್ರವ ಮತ್ತು ಕ್ರಯೋಜೆನಿಕ್​ನ ಮೂರು ಹಂತದೊಂದಿಗೆ ಮಾಡಿರುವ 143 ಅಡಿ ಎತ್ತರದ ಪರೀಕ್ಷಾ ಸಿಬ್ಬಂದಿ ಮಾಡ್ಯೂಲ್​ (ಸಿಎಂ)ನಲ್ಲಿ ಮೂವರು ಗಗನಯಾನಿಗಳು ಇರುತ್ತಾರೆ. ಇದು ಒತ್ತಡ ರಹಿತ ಮಾಡ್ಯೂಲ್​ ಆಗಿದ್ದು, ಬಾಹುಬಲಿ ಎಂದೇ ಖ್ಯಾತಿಯಾದ ಮಾರ್ಕ್-3 (ಎಲ್​ವಿಎಂLVM3) ರಾಕೆಟ್ ಮೂಲಕ ಉಡಾವಣೆ ಮಾಡಲಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!