Tuesday, June 28, 2022

Latest Posts

ಅಭಿಮಾನಿಗಳ ಜಾತ್ರೆಯ ನಡುವೆ ಕರುನಾಡಿನ ಕಂದ ಅಪ್ಪುಗೆ ಸ್ಟಾರ್ ಸೆಲೆಬ್ರೆಟಿಗಳ ಸಲಾಂ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಎಲ್ಲರ ಮೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರ ಅನುಪಸ್ಥಿತಿಯಲ್ಲಿ ಬಹು ನಿರೀಕ್ಷಿತ ‘ಜೇಮ್ಸ್’ ಚಿತ್ರ ತೆರೆಕಂಡಿದೆ.
ಒಂದೆಡೆ ಅಭಿಮಾನಿಗಳು ಜಾತ್ರೆಯ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ಸ್ಟಾರ್ ಸೆಲೆಬ್ರೆಟಿಗಳು ಈ ಚಿತ್ರಕ್ಕೆ ಶುಭಾಶಯ ಕೋರಿದ್ದು, ಅಭಿಮಾನಿಗಳ ಸಂಭ್ರವನ್ನು ಇನ್ನೊಂದು ಮಟ್ಟಕ್ಕೆ ಏರಿಸಿದ್ದಾರೆ.

ಮಲಯಾಳಂ ಸೂಪರ್‌ಸ್ಟಾರ್ ಲಾಲೇಟ
ಸೂಪರ್ ಸ್ಟಾರ್ ನಟ ಮೋಹನ್‌ಲಾಲ್, ‘ಆತ್ಮೀಯ ಪುನೀತ್, ನಿಮ್ಮ ಜೇಮ್ಸ್ ಚಿತ್ರವು ಉತ್ತಮ ಚಿತ್ರವಾಗಲಿದೆ ಎಂದು ನನಗೆ ನಂಬಿಕೆ ಇದೆ. ಇದು ನಮ್ಮೆಲ್ಲರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತದೆ. ನಾವು ನಮ್ಮ ಹೃದಯದಲ್ಲಿ ಸದಾ ನಿಮ್ಮನ್ನು ಇರಿಸಿಕೊಂಡಿರುತ್ತೇವೆ’ ಎಂದು ಅಪ್ಪು ನೆನಪಿಸಿಕೊಂಡಿದ್ದಾರೆ.

ನಟ ಶ್ರೀಕಾಂತ್ ಮೆಕ
ನಟ ಶ್ರೀಕಾಂತ್ ಮೆಕ, ‘ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಇಂದು ’ಜೇಮ್ಸ್’ ಚಿತ್ರ ರಿಲೀಸ್ ಆಗಿದೆ. ನೀವು ಕೋಟಿ ಹೃದಯಗಳಲ್ಲಿ ಸದಾ ಜೀವಂತ ಅಪ್ಪು. ಹುಟ್ಟು ಹಬ್ಬದ ಶುಭಾಶಯಗಳು’ಎಂದು ಶುಭ ಕೋರಿದ್ದಾರೆ.

ನಟ-ನಿರ್ದೇಶಕ ಅನೂಪ್ ಭಂಡಾರಿ
ನಟ-ನಿರ್ದೇಶಕ ಅನೂಪ್ ಭಂಡಾರಿ, ‘ನಾವು ವಿಭಿನ್ನ ಭಾವನೆಗಳನ್ನು ಹೊಂದಿರುವ ಸಿನಿಮಾ ನೋಡಿ ಹೊರಬಂದಿದ್ದೇವೆ. ಆದರೆ ಮೊದಲ ಬಾರಿಗೆ ನಾವೆಲ್ಲರೂ ಅಗಾಧ ಭಾವನೆಗಳಿಂದ ಚಿತ್ರಮಂದಿರಗಳಿಗೆ ಕಾಲಿಡುತ್ತೇವೆ. ನಿಮ್ಮ ಜನ್ಮದಿನದಂದು ನಿಮ್ಮನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ ಅಪ್ಪು ಸರ್. ವಿಶ್ ಯು ಹ್ಯಾಪಿ ಬರ್ತ್‌ಡೇ’ ಎಂದು ಬರೆದುಕೊಂಡಿದ್ದಾರೆ.

ನಟ ವರುಣ್ ತೇಜ್
ತೆಲುಗು ನಟ ವರುಣ್ ತೇಜ್, ‘ಪುನೀತ್ ರಾಜ್ ಕುಮಾರ್ ಅವರು ತಮ್ಮ ಕೆಲಸದ ಮೂಲಕ ಶಾಶ್ವತವಾಗಿ ಬದುಕುತ್ತಾರೆ. ಜೇಮ್ಸ್ ಅವರ ಇಡೀ ತಂಡಕ್ಕೆ ನನ್ನ ಶುಭಾಶಯಗಳು. ಅಪ್ಪು ಅಣ್ಣಾ ನಿಮ್ಮ ಅಸಂಖ್ಯಾತ ಅಭಿಮಾನಿಗಳು ಮತ್ತು ನಾವೆಲ್ಲರೂ ನಿಮ್ಮನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇವೆ.’ ಎಂದಿದ್ದಾರೆ.

ನಟ ಸುರೇಶ್ ಗೋಪಿ
ನಟ ಸುರೇಶ್ ಗೋಪಿ, ‘ಇಂದು ಬಿಡುಗಡೆಯಾಗಿರುವ ’ಜೇಮ್ಸ್’ ತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳು. ಆತ್ಮೀಯ ಪುನೀತ್, ನೀವು ಯಾವಾಗಲೂ ಲಕ್ಷಾಂತರ ಜನರ ಹೃದಯದಲ್ಲಿ ಉಳಿಯುತ್ತೀರಿ.’ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss