Thursday, July 7, 2022

Latest Posts

ಉಕ್ರೇನ್‌ಗೆ ಮತ್ತೊಂದು ಆಘಾತ: ರಷ್ಯಾ ಸ್ವಾಧೀನದಲ್ಲಿ ಮಾರಿಯುಪೋಲ್ ಆಸ್ಪತ್ರೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸತತ ದಾಳಿಗಳಿಂದ ಕಂಗಾಲಾಗಿರುವ ಉಕ್ರೇನ್‌ಗೆ ರಷ್ಯಾ ಮತ್ತೊಂದು ಆಘಾತ ನೀಡಿದೆ.
ಉಕ್ರೇನ್‌ನ ಮಾರಿಯುಪೋಲ್‌ನಲ್ಲಿರುವ ಆಸ್ಪತ್ರೆಯನ್ನು ಸಂಪೂರ್ಣ ವಶಕ್ಕೆ ಪಡೆದಿರುವ ರಷ್ಯಾ ಸೇನೆ, ಅಲ್ಲಿರುವ 400 ಮಂದಿಯನ್ನು ತನ್ನ ಒತ್ತೆಯಾಳಾಗಿಸಿದೆ. ಒತ್ತೆಯಾಳುಗಳಲ್ಲಿ ವೈದ್ಯರು ಹಾಗೂ ರೋಗಿಗಳೂ ಸೇರಿದ್ದಾರೆ.
ರಷ್ಯಾ-ಉಕ್ರೇನ್ ನಡುವಿನ ಯುದ್ಧ 21ನೇ ದಿನಕ್ಕೆ ಕಾಲಿರಿಸಿದ್ದು, ಈಗಾಗಲೇ ಕೆಲವು ಪಟ್ಟಣ, ಕಟ್ಟಡಗಳನ್ನು ರಷ್ಯಾ ಸೇನೆ ತನ್ನ ವಶಕ್ಕೆ ಪಡೆದುಕೊಂಡಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ರಷ್ಯಾ ಈ ಆಸ್ಪತ್ರೆಯನ್ನು ವಶಪಡಿಸಿಕೊಂಡಿದೆ. ಯಾರನ್ನೂ ಹೊರಗೆ ತೆರಳಲು ರಷ್ಯಾದ ಸೇನೆ ಬಿಡುತ್ತಿಲ್ಲ ಎಂದು ಉಕ್ರೇನ್ ಆರೋಪಿಸಿದೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss