ಹೊಸ ದಿಗಂತಹ ಡಿಜಿಟಲ್ ಡೆಸ್ಕ್ :
‘ವೀರಂ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ಮಾಸ್ ಲುಕ್ ಇದೆ. ಈ ಚಿತ್ರಕ್ಕೆ ಶಶಿಧರ್ ಕೆ.ಎಂ. ಬಂಡವಾಳ ಹೂಡಿದ್ದು, ಕುಮಾರ್ ರಾಜ್ ನಿರ್ದೇಶನ ಮಾಡಿದ್ದಾರೆ. ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಅವರು ನಟಿಸಿರುವ ‘ವೀರಂ’ ಚಿತ್ರ ಏಪ್ರಿಲ್ 7ರಂದು ಈ ಚಿತ್ರ ಅದ್ದೂರಿಯಾಗಿ ರಿಲೀಸ್ ಆಗಲಿದೆ.
ಈ ಬಹುನಿರೀಕ್ಷಿತ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಈಗಾಗಲೇ ಟೀಸರ್, ಪೋಸ್ಟರ್ ಮತ್ತು ಹಾಡಿನ ಮೂಲಕ ಈ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಅದರಲ್ಲೂ ‘ಸಾಹಸ ಸಿಂಹ’ ವಿಷ್ಣುವರ್ಧನ್ ಅಭಿಮಾನಿಗಳು ‘ವೀರಂ’ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರು ವಿಷ್ಣುವರ್ಧನ್ ಫ್ಯಾನ್ ಆಗಿ ಕಾಣಿಸಿಕೊಂಡಿರುವುದೇ ಅದಕ್ಕೆ ಕಾರಣ. ಅವರ ಕೈ ಮೇಲೆ ಇರುವ ವಿಷ್ಣು ದಾದಾ ಟ್ಯಾಟೂ ಕೂಡ ಗಮನ ಸೆಳೆಯುತ್ತಿದೆ.
ರಿಲೀಸ್ ಡೇಟ್ ತಿಳಿಸುವ ಸಲುವಾಗಿ ‘ವೀರಂ’ ಚಿತ್ರತಂಡದವರು ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಅದು ತುಂಬ ಮಾಸ್ ಆಗಿದೆ. ಕಾರಿನ ಮೇಲೆ ಪ್ರಜ್ವಲ್ ದೇವರಾಜ್ ನಿಂತಿದ್ದಾರೆ. ಸುತ್ತಲೂ ಜನಜಂಗುಳಿ ಇದೆ. ಹಿಂಬದಿಯಲ್ಲಿ ವಿಷ್ಣುವರ್ಧನ್ ಅಭಿನಯದ ‘ಬಂಧನ’ ಸಿನಿಮಾದ ಪೋಸ್ಟರ್ ಕಾಣಿಸಿದೆ. ಸಿನಿಮಾದಲ್ಲಿ ಈ ಸೀನ್ ಹೇಗೆ ಬಂದಿರಬಹುದು ಎಂಬ ಕೌತುಕ ಸೃಷ್ಟಿ ಆಗಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ‘ವೀರಂ’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊವಿಡ್ ಮುಂತಾದ ಕಾರಣಗಳಿಂದಾಗಿ ರಿಲೀಸ್ ದಿನಾಂಕ ಮುಂದೂಡುವುದು ಅನಿವಾರ್ಯ ಆಯಿತು. ಈಗ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡಿರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದ್ದೂರಿಯಾಗಿ ರಿಲೀಸ್ ಮಾಡಲು ಸಕಲ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.