ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಸರಕಾರದ ಗೃಹ ಸಚಿವರಾಗಿರುವವರು ಹೆಣ್ಣುಮಕ್ಕಳ ವಿಚಾರದಲ್ಲಿ ಹಗುರವಾಗಿ ಮಾತನಾಡಿದ್ದಾರೆ. ಇಡೀ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದರು.
ಹಾವೇರಿಯಲ್ಲಿ (Haveri) ಮಾತನಾಡಿದ ಅವರು, ತನಿಖೆಗೂ ಮೊದಲೇ ಏನೂ ಆಗಿಲ್ಲ ಅಂದ್ರೆ ಪೊಲೀಸರು ಉಡುಪಿ ಪ್ರಕರಣವನ್ನ ಮುಚ್ಚಿ ಹಾಕುತ್ತಾರೆ. ಪ್ರಕರಣದಲ್ಲಿ ಏನು ಇಲ್ಲಾ ಅಂದ್ರೆ, ವಾರ ಬಿಟ್ಟು ಎಫ್‌ಐಆರ್ ಯಾಕೆ ಹಾಕಿದ್ರು? ಎಲ್ಲಾ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸರಕಾರ ಕೆಜಿ ಹಳ್ಳಿ, ಡಿಜೆ ಹಳ್ಳಿ, ಹುಬ್ಬಳ್ಳಿ ಪ್ರಕರಣ ಬೇರೆ. ಹೋರಾಟಗಾರರ ಪ್ರಕರಣಗಳು ಬೇರೆ. ಓಲೈಕೆ ರಾಜಕಾರಣಕ್ಕಾಗಿ ದಂಗೆಕೋರರನ್ನ ಕೈಬಿಡುತ್ತೀರಿ ಅಂದ್ರೆ ಯಾರ ಪರವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಇತ್ತ ಶಾಸಕರು-ಮಂತ್ರಿಗಳ ನಡುವೆ ಸಮನ್ವಯ ಇಲ್ಲದಿರುವುದು ಸ್ಷಷ್ಟವಾಗಿದೆ. ತೇಪೆ ಹಚ್ಚುವ ಕೆಲಸವನ್ನು ಸಿಎಂ ಮಾಡಿದ್ದಾರೆ. ಗೊಂದಲ ಇರುವುದರಿಂದ ಮೀಟಿಂಗ್ ಮಾಡಿದ್ದಾರೆ. ಎಲ್ಲವೂ ಸರಿಯಿದ್ದಿದ್ದರೆ ಹೈಕಮಾಂಡ್ ಯಾಕೆ ಬುಲಾವ್ ಮಾಡ್ತಿತ್ತು? ನಿನ್ನೆ ಮೀಟಿಂಗ್‌ನಲ್ಲಿ ಯಾವುದಕ್ಕೂ ಪರಿಹಾರ ಸಿಕ್ಕಿಲ್ಲ. ಅನುದಾನ ಕೊಡುವುದರಲ್ಲಿ ಗೊಂದಲ, ಗ್ಯಾರಂಟಿ ಅನುಷ್ಠಾನದಲ್ಲಿ ಗೊಂದಲ, ಆಡಳಿತದಲ್ಲಿ ಗೊಂದಲ, ಸರ್ಕಾರ ಗೊಂದಲದಲ್ಲಿದೆ. ಬಹಳ ದೊಡ್ಡ ಭಿನ್ನಾಭಿಪ್ರಾಯ ಇದೆ. ಶಾಸಕರನ್ನ ಸಮಾಧಾನ ಮಾಡುವ ಕೆಲಸ ಸಿಎಂ ಮಾಡಿದ್ದಾರೆ. ಈ ಸರ್ಕಾರ ಪ್ರಾರಂಭದಿo ದಲೂ ಗೊಂದಲದಲ್ಲಿದೆ. ಮತ್ತಷ್ಟು ಗೊಂದಲ ಮಾಡುತ್ತಿದೆ ಎಂದು ಹೇಳಿದರು.