ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೊಂದು ತಿನಿಸುಗಳು ಎಲ್ಲಾ ಸಮಯದಲ್ಲೂ ತಿನ್ನಲು ಸಾಧ್ಯವಿಲ್ಲ. ಆಯಾ ಸೀಸನ್‌ನಲ್ಲಿ ಏನು ಸಿಗುತ್ತದೋ ಅದನ್ನು ಸವಿದು ನೋಡಬೇಕು. ಅದರಂತೆಯೇ ಮಳೆಗಾಲದಲ್ಲಿ ಸಿಗುವ ಪತ್ರೊಡೆ ಅನ್ನು ಮಿಸ್ ಮಾಡದೇ ತಿಂದು ಸವಿಯಿರಿ.
ಪತ್ರೊಡೆ ಮಾಡಲು ಬೇಕಾಗುವ ಸಾಮಾಗ್ರಿಗಳು:
* ಕೆಸುವಿನ ಎಲೆ
* ಅಕ್ಕಿ
* ಅವಲಕ್ಕಿ
* ಬ್ಯಾಡಗಿ ಮೆಣಸು
* ತೆಂಗಿನತುರಿ
* ಇಂಗು
* ಹುಣಸೆಹಣ್ಣು
* ಉಪ್ಪು
ಮಾಡುವ ವಿಧಾನ:
* ಮೊದಲು ಅಕ್ಕಿಯನ್ನು ಒಂದು ತಾಸು ನೆನೆ ಹಾಕಿ
* ಈಗ ಕೆಸುವಿನ ಎಲೆಯನ್ನು ತೊಳೆದು ಅದರ ತೊಟ್ಟು ತೆಗೆಯಿರಿ
* ಮಿಕ್ಸಿ ಜಾರಿಗೆ ತೆಂಗಿನತುರಿ, ಒಣಮೆಣಸು (ಸುಟ್ಟು ಹಾಕಿ,ರುಚಿ ಹೆಚ್ಚುತ್ತೆ), ಹುಣಸೆಹಣ್ಣು, ಅವಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಅಕ್ಕಿಯನ್ನು ಸೋಸಿ ತರಿತರಿಯಾಗಿ ರುಬ್ಬಿ, ತೆಂಗಿನಕಾಯಿ ಪೇಸ್ಟ್ ಅಕ್ಕಿ ತರಿ ಮಿಕ್ಸ್ ಮಾಡಿಕೊಳ್ಳಿ.
* ಈಗ ಕೆಸುವಿನ ಎಲೆಯ ಕೆಳಭಾಗಕ್ಕೆ ರುಬ್ಬಿದ ಮಿಶ್ರಣ ಹಚ್ಚಿ, ಮೊದಲಿಗೆ ದೊಡ್ಡ ಎಲೆಯ ಮೇಲೆ ಹಚ್ಚಿ, ಅದರ ಮೇಲೆ ಮತ್ತೊಂದು ಎಲೆ ಇಟ್ಟು ರುಬ್ಬಿದ ಮಿಶ್ರಣವನ್ನು ಹಚ್ಚಬೇಕು.
* ಹೀಗೆ ಎಲ್ಲಾ ಎಲೆಯ ಮೇಲೆ ಮಿಶ್ರಣ ಹಚ್ಚಿ ನಂತರ ಅದನ್ನು ಸುತ್ತಿ ರೋಲ್ ಮಾಡಿ, ನೂಲು ಅಥವಾ ತೆಂಗಿನನಾರಿನಿಂದ ಕಟ್ಟಿ.
* ಈಗ ರೋಲ್‌ಗಳನ್ನು ಪಾತ್ರೆಯಲ್ಲಿರಿಸಿ ಹಬೆಯಲ್ಲಿ ಬೇಯಿಸಿ.
* ಎಲ್ಲಾ ಆದ ಬಳಿಕ ದುಂಡಾಗಿ ಕತ್ತರಿಸಿ ತವಾಗೆ ಸ್ವಲ್ಪ ತೆಂಗಿನೆಣ್ಣೆ ಅಥವಾ ತುಪ್ಪ ಹಾಕಿ ಫ್ರೈ ಮಾಡಿದರೆ ಪತ್ರೊಡೆ ಸವಿಯಲು ಸಿದ್ಧ.