Wednesday, July 6, 2022

Latest Posts

ಚೆರ್ವತ್ತೂರು ಘಟನೆ ಇಂಪ್ಯಾಕ್ಟ್: ಶವರ್ಮಾ ತಯಾರಿಗೆ ಕೇರಳದಲ್ಲಿ ಶೀಘ್ರ ಗೈಡ್‌ಲೈನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಶವರ್ಮ ತಯಾರಿಕೆ ಗುಣಮಟ್ಟ ಕಾಪಾಡಲು ಏಕರೂಪದ ಮಾನದಂಡ ರಚಿಸಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಕಾಸರಗೋಡಿನ ಚೆರ್ವತ್ತೂರಿನಲ್ಲಿ ಶವರ್ಮ ಸೇವಿಸಿದ ಬಳಿಕ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಆಹಾರ ಸುರಕ್ಷತಾ ಇಲಾಖೆ ನಿರ್ದೇಶಕರಿಂದ ಈಗಾಗಲೇ ವರದಿ ಕೇಳಲಾಗಿದ್ದು, ವರದಿ ಆಧಾರದಲ್ಲಿ ಮುಂದಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆಹಾರ ಸುರಕ್ಷತಾ ಇಲಾಖೆ ಈಗಾಗಲೇ ಕಾಸರಗೋಡು ಸೇರಿದಂತೆ ಕೇರಳದಾದ್ಯಂತ ಶವರ್ಮಾ ಅಂಗಡಿಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿದೆ. ಜೊತೆಗೆ ತಯಾರಿಕಾ ಕಾರ್ಯವಿಧಾನ, ಸ್ವಚ್ಛತೆಗಳ ಬಗ್ಗೆಯೂ ಹದ್ದಿನಕಣ್ಣಿಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss