Thursday, August 11, 2022

Latest Posts

ಜೋಕಾಲಿ ಆಡಿದ ಮಂಗ: ಕೋತಿಯ ಚೇಷ್ಟೆಗೆ ನಕ್ಕ ಜನ!

ಹೊಸದಿಗಂತ ವರದಿ ಗದಗ: 

ಲಕ್ಷ್ಮೇಶ್ವರ ತಾಲೂಕಿನಲ್ಲಿರುವ ಎಪಿಎಂಸಿ ಯಾರ್ಡ್‌ನಲ್ಲಿ ಕಟ್ಟಿರುವ ಉಯ್ಯಾಲೆಯಲ್ಲಿ ಮಂಗವೊಂದು ಕುಳಿತು ಆಟವಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ.  ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಎ.ಪಿ.ಎಂ.ಸಿಯಲ್ಲಿ ಇಂದು ನಾಗರ ಪಂಚಮಿ ಹಬ್ಬದ ಕಳೆ ಕಟ್ಟಿದೆ. ಪೂಜೆಗೆಂದು ಹೋದ ಮಕ್ಕಳು ಆಟವಾಡಲು ಅಲ್ಲೊಂದು ಉಯ್ಯಾಲೆ ಕಟ್ಟಿಲಾಗಿದೆ. ಎಲ್ಲರೂ ಪೂಜೆಯಲ್ಲಿ ಮಗ್ನರಾದ್ದರಿಂದ ಅಲ್ಲೇ ಇದ್ದ ಕೋತಿಯೊಂದು ಉಯ್ಯಾಲೆ ಮೇಲೆ ಕುಳಿತು ಕುಣಿದು ಕುಪ್ಪಳಿಸಿದೆ.

ಉಯ್ಯಾಲೆ ಮನುಷ್ಯರು ಮಾತ್ರ ಆಡಬೇಕಾ..? ನಾವು ಆಡಬಾರದಾ ಅಂತ ಕೋತಿ ಅತ್ತಿಂದಿತ್ತ..ಇತ್ತಿಂದತ್ತ ಕಂಬಿ ಹಿಡಿದು ಬಿಂದಾಸ್ ಆಗಿ ಜೋಕಾಲಿ ಆಡಿದೆ. ಅದನ್ನು ಹುಡುಗರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಹರಿಬಿಟ್ಟಿದ್ದಾರೆ. ಜೋಕಾಲಿ ಆಡುತ್ತಿರುವ ಕೋತಿಯನ್ನು ನೋಡಲು ಜನ ಕೆಲಕಾಲ ಮುಗಿ ಬಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss