ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿಯ ಭಾರತದ ನೂತನ ರಾಯಭಾರಿಯಾಗಿ ಮುಕ್ತೇಶ್ ಕುಮಾರ್ ಪರದೇಶಿ ಅವರನ್ನು ನೇಮಿಸಲಾಗಿದೆ.
ಪರದೇಶಿ ಅವರು, 1991-ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಯಾಗಿದ್ದು, ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ಶೀಘ್ರದಲ್ಲಿಯೇ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂದು MEA ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತ ಯಶಸ್ವಿಯಾಗಿ ಆಯೋಜಿಸಿದ್ದ G20 ಶೃಂಗಸಭೆಯ ಯಶಸ್ವಿ ಹಾಗೂ ಉಕ್ರೇನ್ ಸಂಘರ್ಷದ ಬಗ್ಗೆ ಭಿನ್ನಾಭಿಪ್ರಾಯ ನಿವಾರಿಸುವ ಮೂಲಕ ನಾಯಕರ ಘೋಷಣೆ ತಯಾರಿಕೆಯಲ್ಲಿಪ್ರಮುಖ ಪಾತ್ರ ವಹಿಸಿದ ಉನ್ನತ ಅಧಿಕಾರಿಗಳ ಗುಂಪಿನಲ್ಲಿ ಪರದೇಶಿ ಪ್ರಮುಖರಾಗಿದ್ದರು.