Friday, December 9, 2022

Latest Posts

ದಿನಭವಿಷ್ಯ| ಈ ರಾಶಿಯವರಿಗಿಂದು ಅನಿರೀಕ್ಷಿತ ಧನಲಾಭ

ಮೇಷ
ನಿಮಗಿಂದು ಗ್ರಹಗತಿ ಪೂರಕವಾಗಿದೆ. ಹಾಗಾಗಿ ಎಲ್ಲ ಕಾರ್ಯಗಳಲ್ಲೂ  ಯಶಸ್ಸು. ಧನಾಗಮ. ಬಂಧುಗಳಿಂದ ಸೊತ್ತು ಪಡೆಯುವಿರಿ.

ವೃಷಭ
ಇಂದು ಅಧಿಕ ಕೆಲಸ. ಒತ್ತಡವೂ ಹೆಚ್ಚು. ಅದರ ಜತೆಗೇ ನಿಮ್ಮ ಕಾರ್ಯಕ್ಕೆ ಕೆಲವರಿಂದ ಅಡ್ಡಿ. ಅಪರಾಹ್ನದ ನಂತರ ಪರಿಸ್ಥಿತಿ ಸುಧಾರಿಸುವುದು.

ಮಿಥುನ
ಗೊಂದಲದ ಮನಸ್ಥಿತಿ ಇಂದು ಶಮನಗೊಂಡೀತು. ಕಾಡುತ್ತಿದ ಸಮಸ್ಯೆಗೆ ಪರಿಹಾರ ದೊರಕೀತು. ಇಷ್ಟದೇವರ ಪ್ರಾರ್ಥನೆ ಮಾಡಿರಿ.

ಕಟಕ
ಕಣ್ಣು ಕಿವಿ ತೆರೆದಿಡಿ. ಆದರೆ ಬಾಯನ್ನು ಮುಚ್ಚಿಡಿ. ಇದು ನಿಮಗಿಂದು ಸಲಹೆ.  ದುಡುಕಿನ ಮಾತು ಕೆಲಸ ಕೆಡಿಸೀತು. ಎಲ್ಲರ ಜತೆ ಸೌಹಾರ್ದವಿರಲಿ.

ಸಿಂಹ
ಇತರರ ಭಾವನೆ ಅರಿತು ವ್ಯವಹರಿಸುವಲ್ಲಿ ನೀವು  ಸಫಲರಾಗುವಿರಿ. ಇದರಿಂದ ಸಂಬಂಧ ದಲ್ಲಿ ಸುಧಾರಣೆ. ಭಿನ್ನಮತ ನಿವಾರಣೆ. ಆತ್ಮೀಯತೆ ಹೆಚ್ಚುವುದು

ಕನ್ಯಾ
ವೃತ್ತಿಯ ಒತ್ತಡವು ಇಂದು ಕಡಿಮೆ. ಇದರಿಂದ ಮನಸ್ಸು ನಿರಾಳ. ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ ಲಭಿಸುವುದು.

ತುಲಾ
ಅನಿರೀಕ್ಷಿತ ಧನ ಅಥವಾ ಸೊತ್ತು ಲಾಭ. ಉದ್ಯಮದಲ್ಲಿ ಪ್ರಗತಿ. ಕೆಲ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗುವುದು. ಆಪ್ತರ ಸಹಕಾರ.

ವೃಶ್ಚಿಕ
ಕೆಲವೊಮ್ಮೆ ಅತಿಯಾದ ಒತ್ತಡವು ನಿಮ್ಮಿಂದ ಉತ್ತಮ ಕೆಲಸ ಹೊರತೆಗೆಸುತ್ತದೆ. ಇದು ನಿಮಗೂ ಇಂದು ಅನ್ವಯ. ದಿನದಂತ್ಯಕ್ಕೆ ಎಲ್ಲರಿಂದ ಮೆಚ್ಚುಗೆ.

ಧನು
ನಿಮಗಿಂದು ಮನೆಯಲ್ಲಿ ಅಧಿಕ ಕಾರ್ಯವಿದೆ.  ಜತೆಗೂಡಿ ಕೆಲಸ ಮಾಡಿದರೆ ಅದು ಸುಲಭವಾದೀತು. ಆರ್ಥಿಕ ಸ್ಥಿತಿ ಸುಧಾರಣೆ. ಧನ ಲಾಭ.

ಮಕರ
ಕೆಲವರ ಪ್ರತಿರೋಧ. ನಿಮ್ಮ ಕಾರ್ಯ ಟೀಕಿಸು ವವರು ಹಲವರಿದ್ದಾರೆ. ಕೆಲವರನ್ನು ಕಡೆಗಣಿಸು ವುದೇ ಒಳಿತು. ಎಲ್ಲರನ್ನು ಮೆಚ್ಚಿಸಲು ಹೋಗದಿರಿ.

ಕುಂಭ
ಆಪ್ತರೊಂದಿಗೆ ಗಂಭೀರ ವಿಷಯದ ಚರ್ಚೆ ನಡೆದೀತು. ಇತರರ ಸಲಹೆ ಪಡೆದೇ ಮುಂದಿನ ಹೆಜ್ಜೆ ಇಡಿ. ಕೌಟುಂಬಿಕ ಬಿಕ್ಕಟ್ಟು ಪರಿಹಾರ ಕಾಣುವುದು.

ಮೀನ
ಅನಿರೀಕ್ಷಿತ ಖರ್ಚು. ಜೊತೆಗೆ ಬೆಳವಣಿಗೆ. ಹೊಟ್ಟೆ ಕೆಡುವ ಪ್ರಸಂಗ. ಇಂದಿನ ದಿನ ನಿಮಗೆ ಕಹಿಯಾ ದರೂ, ಅನುಭವದ ಪಾಠವೂ ನಿಮಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!