ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ಎಂದಿಗಿಂತ ಹೆಚ್ಚು ಕೆಲಸದ ಹೊರೆ. ಎಲ್ಲವನ್ನೂ ಸರಿಯಾಗಿ ಮಾಡಲು ಗಮನ ಕೊಡಿ. ಯಾವುದನ್ನೂ ಕಡೆಗಣಿಸದಿರಿ. ಅನಿರೀಕ್ಷಿತ ಧನ ಲಾಭ.
ವೃಷಭ
ಮನಸ್ಸಿನಲ್ಲಿ ಗೊಂದಲ. ಸಂಬಂಧದಲ್ಲಿ ತೃಪ್ತಿಯಿಲ್ಲ. ಆಪ್ತರಿಂದ ಹೆಚ್ಚಿನದ್ದನ್ನು ನಿರೀಕ್ಷಿಸುವಿರಿ.ಇಂದು ಆದಾಯ, ಖರ್ಚು ಎರಡೂ ಹೆಚ್ಚು.
ಮಿಥುನ
ನಿಮ್ಮ ಗುರಿ ಸಾಧಿಸಲು ಬುದ್ಧಿಯನ್ನು ಹೆಚ್ಚು ಉಪಯೋಗಿಸಿ. ಹತಾಶ ಭಾವ ತೊಲಗಿಸಲು ಮನಸ್ಸಿನಲ್ಲಿ ನಿರಾಳತೆ ತಂದುಕೊಳ್ಳಿ. ಸಂಗಾತಿ ಆಯ್ಕೆ ಫಲ ಕಾಣಲಿದೆ.
ಕಟಕ
ದಿನವಿಡೀ ವೃತ್ತಿಯ ಒತ್ತಡ. ಎಲ್ಲರೊಂದಿಗೆ ಸೌಹಾರ್ದ ಸಂಬಂಧ ಕಾಯ್ದುಕೊಳ್ಳಿ. ಸಣ್ಣ ಮಾತು ಬಾಂಧವ್ಯ ಕೆಡಿಸದಂತೆ ನೋಡಿಕೊಳ್ಳಿ.
ಸಿಂಹ
ನಿಮ್ಮ ಕೆಲಸ, ಸಾಮರ್ಥ್ಯ ಎಲ್ಲರೂ ಗುರುತಿಸುತ್ತಿಲ್ಲ ಎಂಬ ಕೊರಗು ಕಾಡಬಹುದು. ಮೊದಲಿಗೆ ನಿಮ್ಮಲ್ಲಿ ಆತ್ಮತೃಪ್ತಿ ಬೆಳೆಸಿಕೊಳ್ಳಿ. ಕೌಟುಂಬಿಕ ಸಹಕಾರ.
ಕನ್ಯಾ
ವೃತ್ತಿಯಲ್ಲಿ ಅನಿರೀಕ್ಷಿತ ಪ್ರಸಂಗ ನಡೆದೀತು. ಏನೋ ಅಸಮಾಧಾನ, ಅಸಹನೆ ಹೆಚ್ಚೀತು. ಆದಾಯ ಕುಂಠಿತ. ದೈಹಿಕ ಹಾಗೂ ಮಾನಸಿಕ ನೋವು.
ತುಲಾ
ಖಾಸಗಿ ಅಥವಾ ವೃತ್ತಿ ಬದುಕಲ್ಲಿ ನಿಮಗೆ ಹಿತ ತರುವ ಕಾರ್ಯವಷ್ಟೆ ಮಾಡಿ. ಯಾರದೋ ಮುಲಾಜಿಗೆ ಬಿದ್ದು ನಿಮಗೇ ಹಾನಿ ತಂದುಕೊಳ್ಳದಿರಿ.
ವೃಶ್ಚಿಕ
ಎಲ್ಲರೊಂದಿಗೆ ಸಹಕಾರದಿಂದ ಕಾರ್ಯ ನಿರ್ವಹಿಸುವಿರಿ. ಆದರೂ ಕೆಲವರ ಟೀಕೆ ತಪ್ಪದು. ಅದನ್ನು ಕಡೆಗಣಿಸಿ. ಸಂಗಾತಿ ಜತೆ ಸಂತೋಷದ ಕಾಲಕ್ಷೇಪ.
ಧನು
ನಿಮ್ಮ ಪ್ರಮುಖ ಗುರಿ ಇಂದು ಈಡೇರುವುದು. ಹಣದ ಹರಿವು ಹೆಚ್ಚಳ. ಸರಿಯಾದ ಹೂಡಿಕೆಯಿಂದ ಲಾಭ. ಆದರೆ ಆರೋಗ್ಯ ಸಮಸ್ಯೆ ಕಾಡೀತು.
ಮಕರ
ವೃತ್ತಿಗೆ ಸಂಬಂಧಿಸಿ ಉತ್ತಮ ಪ್ರಗತಿ. ಇತರರ ಒಳ್ಳೆಯ ಕಾರ್ಯ ಮೆಚ್ಚಿ ಕೊಳ್ಳಿ. ಅವರ ಸಹಕಾರ ಪಡೆಯಿರಿ. ಆತ್ಮೀಯರಿಂದ ಅಚ್ಚರಿಯ ಕೊಡುಗೆ.
ಕುಂಭ
ಕೆಲವರ ಜತೆಗೆ ವಿರಸ ಮೂಡಬಹುದು. ಅದನ್ನು ಅತಿರೇಕಕ್ಕೆ ಕೊಂಡೊಯ್ಯದಿರಿ. ಹಣದ ಪರಿಸ್ಥಿತಿ ಉತ್ತಮ. ಆತ್ಮೀಯರ ಭೇಟಿ ಸಂಭವ.
ಮೀನ
ಹಣವನ್ನು ವ್ಯಯಿಸು ವಲ್ಲಿ ತುಸು ಎಚ್ಚರ ವಹಿಸಿ. ಬೇಕಾಬಿಟ್ಟಿ ಖರ್ಚು ಮಾಡದಿರಿ. ಆಹಾರ ಸೇವನೆಯಲ್ಲಿ ಆರೋಗ್ಯಕರ ಪದ್ಧತಿ ಪಾಲಿಸಿರಿ.