Monday, September 26, 2022

Latest Posts

ಚಿತ್ತೂರಿನಲ್ಲಿ ಅಗ್ನಿ ಅವಘಡ: ಪೇಪರ್ ಪ್ಲೇಟ್ ಯೂನಿಟ್‌ಗೆ ಬೆಂಕಿ, ಮೂವರು ಸಜೀವ ದಹನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಂಗಳವಾರ ಮಧ್ಯರಾತ್ರಿಯ ಪೇಪರ್ ಪ್ಲೇಟ್ ತಯಾರಿಕಾ ಕಾರ್ಖಾನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕಾರ್ಖಾನೆಯಲ್ಲಿದ್ದ ಮೂವರು ಬೆಂಕಿಗಾಹುತಿಯಾಗಿರುವ ದಾರುಣ ಘಟನೆ ಚಿತ್ತೂರು ಜಿಲ್ಲೆಯ ರಂಗಾಚಾರಿ ಬೀದಿಯಲ್ಲಿ ನಡೆದಿದೆ. ಮೃತರಲ್ಲಿ ಕೈಗಾರಿಕೋದ್ಯಮಿ ಭಾಸ್ಕರ್ ಮತ್ತು ಅವರ ಪುತ್ರ ದೆಹಲಿ ಬಾಬು ಸೇರಿದ್ದಾರೆ. ಬೆಂಕಿ ತೀವ್ರವಾಗಿ ವ್ಯಾಪಿಸುತ್ತಿದ್ದಂತೆ ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಬೆಂಕಿ ಅನಾಹುತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ.

ಚಿತ್ತೂರಿನ ರಂಗಾಚಾರಿ ಬೀದಿಯಲ್ಲಿರುವ ಎರಡು ಅಂತಸ್ತಿನ ಕಟ್ಟಡದಲ್ಲಿ ಈ ಅವಘಡ ಸಂಭವಿಸಿದೆ. ನೆಲಮಹಡಿಯಲ್ಲಿ ಪೇಪರ್ ಪ್ಲೇಟ್ ತಯಾರಿಕಾ ಘಟಕ ನಡೆಯುತ್ತಿದೆ. ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ಕುಟುಂಬ ವಾಸಿಸುತ್ತಿದ್ದಾರೆ. ಪೇಪರ್ ಪ್ಲೇಟ್ ತಯಾರಿಕಾ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆ ಎರಡನೇ ಮಹಡಿಗೂ ವ್ಯಾಪಿಸಿತು. ಮೃತಪಟ್ಟವರಲ್ಲಿ ತಂದೆ ಮತ್ತು ಮಗ ಭಾಸ್ಕರ್ (65), ದಿಲ್ಲಿ ಬಾಬು (35) ಮತ್ತು ಇನ್ನೊಬ್ಬ ಬಾಲಾಜಿ (25) ಎಂದು ಗುರುತಿಸಲಾಗಿದೆ.

ದುರಂತ ಅಂದ್ರೆ ಭಾಸ್ಕರ್ ಅವರ ಪುತ್ರ ದಿಲ್ಲಿಬಾಬು ಅವರ ಜನ್ಮದಿನಾಚರಣೆ ಕೂಡ ಮಂಗಳವಾರ ನಡೆಯಿತು. ಅಂದೇ ತಂದೆ ಮಗ ಸಾವನ್ನಪ್ಪಿದ್ದು ಕುಟುಂಬದಲ್ಲಿ ತೀವ್ರ ಆಘಾತ ಉಂಟಾಗಿದೆ. ಪ್ರಾಣಹಾನಿ ಜೊತೆಗೆ ಧನಹಾನಿ ಕೂಡ ಆಗಿದೆ. ಕಾರ್ಖಾನೆ ಧಗಧಗನೆ ಹೊತ್ತು ಉರಿದಿದ್ದು ಅಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!