Monday, March 27, 2023

Latest Posts

ದಿನಭವಿಷ್ಯ| ಕೆಲವು ವಿಷಯಗಳು ಚಿಂತೆಗೆ ಕಾರಣವಾಗಿದ್ದರೂ ಅದಿಂದು ನಿವಾರಣೆ ಆಗುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಆರೋಗ್ಯ ಸಮಸ್ಯೆ ಕಾಣಿಸಬಹುದು. ಹೊರಗಡೆ ತಿನ್ನುವುದನ್ನು ತಪ್ಪಿಸಿರಿ. ಅನಿರೀಕ್ಷಿತ ಖರ್ಚು. ಬಂಧುಗಳೊಂದಿಗೆ ಕಲಹ ಉಂಟಾದೀತು.

ವೃಷಭ
ಮನೆಯಲ್ಲಿ ಶಾಂತಿ ಕಾಪಾಡಲು ಆದ್ಯತೆ ಕೊಡಿ.  ವಾಗ್ವಾದಕ್ಕೆ ಇಳಿಯಬೇಡಿ. ಕೆಲವು ವಿಷಯಗಳಲ್ಲಿ ಕುಟುಂಬದ ಬೆಂಬಲ ಸಿಗಲಾರದು.

ಮಿಥುನ
ಸಂಬಂಧದಲ್ಲಿ ಏರುಪೇರು. ಈಡೇರಿಸಲಾಗದ ಭರವಸೆ ಕೊಡಲು ಹೋಗದಿರಿ. ಪುಟ್ಟ ಪ್ರಸಂಗವೊಂದು ಶಾಂತಿ ಕದಡಬಹುದು.

ಕಟಕ
ಉದ್ದೇಶಿತ ಕಾರ್ಯಕ್ಕೆ ವಿಘ್ನ. ಹಾಗಾಗಿ ಎಲ್ಲವೂ ವಿಳಂಬವಾಗುವುದು. ಕೆಲವರ ವರ್ತನೆಯೂ ನಿಮ್ಮ ನೆಮ್ಮದಿ ಕಲಕುವುದು. ಕೌಟುಂಬಿಕ ಬೇಗುದಿ.

ಕಟಕ
ಉದ್ದೇಶಿತ ಕಾರ್ಯಕ್ಕೆ ವಿಘ್ನ. ಹಾಗಾಗಿ ಎಲ್ಲವೂ ವಿಳಂಬವಾಗುವುದು. ಕೆಲವರ ವರ್ತನೆಯೂ ನಿಮ್ಮ ನೆಮ್ಮದಿ ಕಲಕುವುದು. ಕೌಟುಂಬಿಕ ಬೇಗುದಿ.

ಸಿಂಹ
ಕೆಲವು ವಿಷಯಗಳು ಚಿಂತೆಗೆ ಕಾರಣ ವಾಗಿದ್ದರೂ ಅದಿಂದು ನಿವಾರಣೆ ಆಗುವುದು. ಮನಸ್ಸಿಗೆ ನಿರಾಳತೆ. ಕುಟುಂಬ ಸದಸ್ಯರಿಂದ ಸಹಕಾರ.

ಕನ್ಯಾ
ಕೆಲಸದ ಮೇಲೆ ಏಕಾಗ್ರತೆ ಸಾಧಿಸಲು ವಿಫಲ. ಮನಸ್ಸು ಬೇರಾವುದೋ ವಿಷಯದಲ್ಲಿ ವ್ಯಸ್ತ. ಪ್ರೀತಿಪಾತ್ರರ ಕುರಿತಂತೆ ಹೆಚ್ಚಾಗಿ ಚಿಂತಿಸುವಿರಿ. ಆರ್ಥಿಕ ಒತ್ತಡ ಹೆಚ್ಚು.

ತುಲಾ
ನಿಮ್ಮಲ್ಲಿ ಇಂದು ಉತ್ಸಾಹ ಕಡಿಮೆ. ಕೆಲಸದಲ್ಲಿ ನಿರ್ಲಕ್ಷ್ಯ ತೋರುವ ಸಂಭವ. ಕೆಲಸದ ಒತ್ತಡದಿಂದ ತುಸು ಕಾಲ ಹೊರಬರುವುದು ಒಳ್ಳೆಯದು.

ವೃಶ್ಚಿಕ
ನಿಮ್ಮ ಕುರಿತಂತೆ ಕೆಲವರು ಟೀಕೆಯಾಡಬಹುದು. ಅದನ್ನು ನಿರ್ಲಕ್ಷಿಸುವುದೇ ಉತ್ತಮ. ನಿಮ್ಮ ಕೆಲಸ ಮಾಡುತ್ತಾ ಹೋಗಿ. ಫಲಕ್ಕೆ ತಕ್ಕ ಪ್ರತಿಫಲ ಸಿಗುವುದು.

ಧನು
ವೃತ್ತಿ ಕ್ಷೇತ್ರದಲ್ಲಿ ಕೋಲಾಹಲ ಸಂಭವಿಸಬಹುದು. ತಾಳ್ಮೆಯಿಂದ ನಿಭಾಯಿಸಿ. ಮನೆಯ ಪೂರಕ ಪರಿಸರದಲ್ಲಿ ಮನಸ್ಸಿಗೆ ಶಾಂತಿ.

ಮಕರ
ಕೆಲವರು ನಿಮ್ಮಿಂದ ಅತಿಯಾದುದನ್ನು ನಿರೀಕ್ಷಿಸುತ್ತಾರೆ. ಅದರಿಂದ ಬೇಸರ ಬೇಡ. ಅವರ ನಿರೀಕ್ಷೆಯ ಮಟ್ಟ ತಲುಪಲು ಪ್ರಯತ್ನಿಸಿರಿ.

ಕುಂಭ
ಆರೋಗ್ಯ ಸಮಸ್ಯೆ ಕಾಡಬಹುದು. ಕೆಲಸದಲ್ಲಿ ಉದಾಸೀನತೆ. ಕಾರ್ಯ ಅಪೂರ್ಣ. ಆಪ್ತ ಬಂಧುಗಳಿಂದ ಅನಾದರ. ಇದರಿಂದ ಮನಸ್ಸಿಗೆ ಘಾಸಿ.

ಮೀನ
ಪ್ರೀತಿಯ ವಿಷಯದಲ್ಲಿ ಪ್ರತಿಕೂಲ ಪರಿಸ್ಥಿತಿ. ಆಪ್ತರು ನಿಮ್ಮನ್ನು ದೂರ ಮಾಡಬಹುದು. ಮಾನಸಿಕವಾಗಿ ಕುಗ್ಗುವಿರಿ. ಅಧ್ಯಾತ್ಮದಲ್ಲಿ ಆಸಕ್ತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!