ದಿನಭವಿಷ್ಯ | ಭವಿಷ್ಯದ ಕುರಿತು ಅತಿಯಾಗಿ ಚಿಂತಿಸದಿರಿ, ವರ್ತಮಾನದಲ್ಲಿ ಬದುಕಲು ಕಲಿಯಿರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಷ
ನಿಮ್ಮ ಅನುಭವವು ಇಂದು ಸಮಸ್ಯೆ ಪರಿಹಾರಕ್ಕೆ ನೆರವಾಗು ವುದು. ಇತರರ ಮಾತುಗಳಿಗೆ ತುಂಬಾ ತಲೆಕೆಡಿಸಿಕೊಳ್ಳದಿರಿ. ವಿವೇಕದಿಂದ ವರ್ತಿಸಿ.

ವೃಷಭ
ಹೆಚ್ಚು ಹೊಣೆಗಾರಿಕೆ ನಿಮ್ಮ ಮೇಲೇರುವುದು. ಅದನ್ನು ಸಮರ್ಥವಾಗಿ ನಿಭಾಯಿಸಿ. ಹಾಗೆ ಮಾಡಿದಲ್ಲಿ ನಿಮಗೆ ಇನ್ನಿತರ ಲಾಭವೂ ದೊರಕಲಿದೆ.

ಮಿಥುನ
ಹಣದ ಸಮಸ್ಯೆ ಕಾಡಬಹುದು. ಬದುಕಿನಲ್ಲಿ ತುಸು ಹೊಂದಾಣಿಕೆ ಮಾಡಿಕೊಳ್ಳಬೇಕು. ನಿಮ್ಮ ನಿಲುವಿಗೆ ಅಂಟಿ ಕೂರಬೇಡಿ.

ಕಟಕ
ಅನವಶ್ಯ ಖರ್ಚು ನಿಮ್ಮ ಜೇಬಿಗೆ ಕತ್ತರಿ ಹಾಕುವುದು. ಪ್ರೀತಿಪಾತ್ರರ ಬೇಡಿಕೆ ಈಡೇರಿಸುವ ಭರದಲ್ಲಿ ಆರ್ಥಿಕ ಸ್ಥಿತಿ ಮರೆಯಬೇಡಿ.

ಸಿಂಹ
ನಿಮ್ಮ ಕಾರ್ಯಕ್ಕೆ ತೀವ್ರ ಪೈಪೋಟಿ ಎದುರಾಗುವುದು. ಸ್ಪರ್ಧೆಯಲ್ಲಿ ಹಿಂದೆ ಬೀಳಬೇಡಿ. ಆರ್ಥಿಕ ದುಸ್ಥಿತಿ ಚಿಂತೆಗೆ ಕಾರಣವಾಗುವುದು.

ಕನ್ಯಾ
ಕೆಲವು ವಿಷಯಗಳು ನಿಮ್ಮಲ್ಲಿ ಅಂಜಿಕೆ ಸೃಷ್ಟಿಸಿವೆ. ಭವಿಷ್ಯದ ಕುರಿತು ಅತಿಯಾಗಿ ಚಿಂತಿಸದಿರಿ. ವರ್ತಮಾನದಲ್ಲಿ ಬದುಕಲು ಕಲಿಯಿರಿ.

ತುಲಾ
ಕೌಟುಂಬಿಕ ಕಾರ್ಯಗಳು ಇಂದು ನಿಮ್ಮನ್ನು ದಿನವಿಡೀ ಕಾಡುತ್ತವೆ. ಉಳಿದ ವಿಷಯಗಳಿಗೆ ಗಮನ ಹರಿಸಲು ಸಮಯ ಸಾಲುವುದಿಲ್ಲ.

ವೃಶ್ಚಿಕ
ಖಾಸಗಿ ಜೀವನದ ಕುರಿತಂತೆ ಹೆಚ್ಚು
ಆದ್ಯತೆ ಕೊಡಿ. ನಿಮ್ಮ ಹಿತಾಸಕ್ತಿ ಬಲಿಗೊಟ್ಟು ಇತರರಿಗಾಗಿ ತುಡಿಯಬೇಡಿ. ಕೌಟುಂಬಿಕ ಬಿಕ್ಕಟ್ಟು.

ಧನು
ಬಿಡುವಿಲ್ಲದ ದಿನ. ನಿಮಗಷ್ಟೇ ಅಲ್ಲದೆ ಇತರರಿಗಾಗಿಯೂ ನೀವಿಂದು ಕೆಲಸ ಮಾಡಬೇಕಾಗುತ್ತದೆ. ಆದರೆ ಹೆಚ್ಚು ರಿಸ್ಕ್ ತೆಗೆದುಕೊಳ್ಳದಿರಿ.

ಮಕರ
ನಿಮಿಗಿಷ್ಟವಾದ ಕಾರ್ಯದಲ್ಲಿ ತೊಡಗುವಿರಿ.  ಈ ವಿಷಯದಲ್ಲಿ ಯಾವುದೇ ನಿರ್ಬಂಧ ಇಂದು ನಿಮ್ಮನ್ನು ಕಾಡದು.

ಕುಂಭ
ನಿಮ್ಮ ಯಶಸ್ಸು ಇತರರು ಕರುಬುವಂತೆ ಮಾಡಲಿದೆ. ನಿಮ್ಮ ಬಗ್ಗೆ ಕೆಲವರು ಅಪಪ್ರಚಾರ ಮಾಡಿಯಾರು. ಬಹಿರಂಗವಾಗಿ ಅವರನ್ನು ಖಂಡಿಸದಿರಿ.

ಮೀನ
ನೆರೆಕರೆಯಿಂದ ಕಿರಿಕಿರಿ. ಜಗಳವಾಡದೆ ದೂರ ಉಳಿಯುವುದೇ ನಿಮಗೆ ಸೂಕ್ತ ದಾರಿ. ಸಂಘರ್ಷ ಮನಶ್ಯಾಂತಿ ಇನ್ನಷ್ಟು ಕೆಡಿಸಬಹುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!