ಹೊಸ ದಿಗಂತ ಡಿಜಿಟಲ್ ಡೆಸ್ಕ್
ಒಂದು ಒಳ್ಳೆಯ ವಿಷಯ… ಆದರೆ ಅದರಲ್ಲೇ ಒಂದು ಖೇದವೂ ಇದೆ. ಅರೆ ಏನಿದು ಅಂದಿರಾ?
ಸ್ಪೇನ್ ದೇಶದ ಪತ್ರಿಕೆಯೊಂದು ಏರುಗತಿಯಲ್ಲಿರುವ ಭಾರತದ ಆರ್ಥಿಕ ಸ್ಥಿತಿಯನ್ನು ಮುಖಪುಟದ ಶೀರ್ಷಿಕೆ ಮಾಡಿದೆ. ಆದರೆ ಈ ಸಾಧನೆಯನ್ನು ಚಿತ್ರಿಸಿರುವ ರೀತಿ ಮಾತ್ರ ನಮ್ಮನ್ನು ಮತ್ತದೇ ದಯನೀಯ ಐಡೆಂಟಿಟಿಗೆ ಕಟ್ಟು ಹಾಕುವಂತಿದೆ.
ಇದನ್ನು ಗಮನಕ್ಕೆ ತಂದಿರುವುದು ಪ್ರಖ್ಯಾತ ಸ್ಟಾರ್ಟಪ್ ಆಗಿರುವ ಝೆರೋದದ ಸ್ಥಾಪಕ ನಿತಿನ್ ಕಾಮತ್, ತಮ್ಮ ಟ್ವೀಟ್ ಮೂಲಕ.
ಆಗಿರುವುದೇನೆಂದರೆ, ಸ್ಪೇನ್ ನ ಪತ್ರಿಕೆ ಭಾರತದ ಆರ್ಥಿಕತೆ ಏರುಗತಿಯಲ್ಲಿದೆ ಎಂಬುದನ್ನೇನೋ ತೋರಿಸಿದೆ. ಆದರೆ ಆ ಏರುತ್ತಿರುವ ಗ್ರಾಫನ್ನು ಹಾವಿನಂತೆ ಚಿತ್ರಿಸಿ, ಕೆಳಗೆ ಪುಂಗಿ ಊದುತ್ತಿರುವ ಹಾವಾಡಿಗನನ್ನು ತೋರಿಸಿದೆ.
ಇದನ್ನು ಉಲ್ಲೇಖಿಸುತ್ತ ನಿತಿನ್ ಕಾಮತ್ ಬರೆದಿದ್ದಾರೆ- “ಸಾಧನೆಯ ಹೊತ್ತಲ್ಲೂ ನಾವು ಹಾವಾಡಿಗರ ದೇಶವಾಗಿ ಚಿತ್ರಿಸಿಕೊಳ್ಳುತ್ತಿರುವುದನ್ನು ತಪ್ಪಿಸಿಕೊಳ್ಳೋದು ಹೇಗೆ? ಬಹುಶಃ ಭಾರತದಿಂದ ಜಾಗತಿಕ ಉತ್ಪನ್ನವೊಂದು ಬರಬೇಕಿದೆ.”
"The hour of the Indian economy," says La Vanguardia, a leading Spanish daily.
Quite cool that the world is taking notice, but the cultural caricaturing, a snake charmer to represent India, is an insult.
Wonder what it takes for this to stop; maybe global Indian products? pic.twitter.com/YY3ribZIaq— Nithin Kamath (@Nithin0dha) October 13, 2022