Tuesday, March 28, 2023

Latest Posts

ದಿನಭವಿಷ್ಯ| ಸಣ್ಣ ಪುಟ್ಟ ವಿಷಯಗಳಿಗೆ ಸಹನೆ ಕಳೆದುಕೊಳ್ಳದಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಮುಂಜಾನೆಯ ಅವಧಿ ಅತ್ಯಧಿಕ ಕೆಲಸ. ಆದರೆ ಅಪರಾಹ್ನ ನಿರಾಳತೆ ಅನುಭವಿಸುವಿರಿ. ಸಂಜೆ ವೇಳೆ ಕುಟುಂಬಸ್ಥರ ಜತೆ ಆತ್ಮೀಯ ಕಾಲಕ್ಷೇಪ.

ವೃಷಭ
ಇಂದು ನೀವು ಭಿನ್ನ ಶೈಲಿಯಲ್ಲಿ ಕಾರ್‍ಯ ಮಾಡಬೇಕಾಗುವುದು. ಅದರಿಂದಷ್ಟೇ ಸಫಲತೆ. ಪ್ರೀತಿಪಾತ್ರರು ನಿಮ್ಮ ಸಹಕಾರಕ್ಕೆ ಸದಾ ಸಿದ್ಧರಾಗಿದ್ದಾರೆ.

ಮಿಥುನ
ಇಂದು ಸಂತೋಷದ ದಿನ. ಆಪ್ತರೊಂದಿಗೆ ಕಾಲಕ್ಷೇಪ. ಉದ್ಯೋಗ ದಲ್ಲಿ ಪ್ರಗತಿ. ಕುಟುಂಬ ಮತ್ತು ವೃತ್ತಿ ಮಧ್ಯೆ ಉತ್ತಮ ಸಮತೋಲನ ಸಾಧಿಸಿರಿ.

ಕಟಕ
ಸಮಾಧಾನಚಿತ್ತದಿಂದ ಇಂದು ವ್ಯವಹರಿಸ ಬೇಕು.ಸಣ್ಣ ಪುಟ್ಟ ವಿಷಯಗಳಿಗೆ ಸಹನೆ ಕಳೆದುಕೊಳ್ಳದಿರಿ.  ದಿನದ ಉತ್ತರಾರ್ಧದಲ್ಲಿ ಧನ ಲಾಭ.

ಸಿಂಹ
ಉತ್ತಮ ಅವಕಾಶ ದೊರಕುವುದು ಅಪರೂಪ. ನಿಮಗಿಂದು ಅಂತಹ ಅವಕಾಶ ದೊರಕಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ.

ಕನ್ಯಾ
ವೃತ್ತಿಯಲ್ಲಿ ಉತ್ತಮ ಸಾಧನೆ. ಇತರರಿಂದ ಶ್ಲಾಘನೆ. ಆದರೆ ಕೌಟುಂಬಿಕವಾಗಿ ಅತೃಪ್ತಿಯ ಬೆಳವಣಿಗೆ. ಮಾನಸಿಕ ದುಗುಡ.
ಅಶಾಂತಿ.

ತುಲಾ
ಸರಳತೆಯೇ ನಿಮ್ಮ ಮೂಲಮಂತ್ರ. ಅದರಿಂದಲೇ ಕಾರ್‍ಯ ಸಿದ್ಧಿ. ಧಾರ್ಮಿಕ ಕಾರ್‍ಯಗಳಲ್ಲಿ ಹೆಚ್ಚು ಆಸಕ್ತಿ ವಹಿಸುವಿರಿ. ಕೌಟುಂಬಿಕ ನೆಮ್ಮದಿ.

ವೃಶ್ಚಿಕ
ಆರ್ಥಿಕ ಪರಿಸ್ಥಿತಿ ಸುಧಾರಣೆ. ಆದರೆ ಆರೋಗ್ಯ ಸಮಸ್ಯೆ ಕಾಡಬಹುದು. ಎಣ್ಣೆ ತಿನಿಸುಗಳಿಂದ ದೂರವಿರಿ. ಕೌಟುಂಬಿಕ ಸಹಕಾರ.

ಧನು
ಕೆಲವರು ನಿಮ್ಮೊಂದಿಗೆ ಅತಿರೇಕದಿಂದ ವರ್ತಿಸಬಹುದು. ನೀವು ಮಾತ್ರ ಸಂಯಮದಿಂದ ಪ್ರತಿಕ್ರಿಯಿಸಿ. ಇಲ್ಲವಾದರೆ ಸಂಘರ್ಷ

ಮಕರ
ಕಾರ್‍ಯದಲ್ಲಿ ಅಡ್ಡಿ. ಆದರೂ ನೀವು ಮುಂದುವರಿಯುತ್ತಲೇ  ಇರಬೇಕು. ಕೆಲಸ ನಿಲ್ಲಿಸದಿರಿ. ಅವಶ್ಯ ನೆರವು ನಿಮಗೆ ಒದಗುವುದು.

ಕುಂಭ
ನಿಮ್ಮ ಅಹಂ ತ್ಯಜಿಸಿ ವ್ಯವಹರಿಸ ಬೇಕಾಗಿರುವುದು ಅಗತ್ಯ. ಇಲ್ಲವಾದಲ್ಲಿ ಮನಸ್ಸಿಗೆ ದೊಡ್ಡ ಪೆಟ್ಟು ಬೀಳಬಹುದು. ಕೌಟುಂಬಿಕ ಬಿಕ್ಕಟ್ಟು.

ಮೀನ
ಕಾಲಮಿತಿಯಲ್ಲಿ ಕೆಲಸ  ಪೂರೈಸಲಸಾಧ್ಯ. ಭಾವನಾತ್ಮಕ ಸಂಘರ್ಷ.  ಸಣ್ಣ ಮಾತೂ ಮನಸ್ಸಿಗೆ ನೋವು ತಂದುಕೊಡಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!