ದಿನ ಭವಿಷ್ಯ | ವೃತ್ತಿಗೆ ಸಂಬಂಧಿಸಿ ನಿರ್ಧಾರ ತಾಳುವಾಗ ಸಾಕಷ್ಟು ಯೋಚಿಸಿ

ಹೊಸಗಂತ ಡಿಜಿಟಲ್‌ ಡೆಸ್ಕ್‌
ಮೇಷ
ವೃತ್ತಿಯಲ್ಲಿ ಕೆಲವು ಸಮಸ್ಯೆ, ಒತ್ತಡ. ಅದರಿಂದ ಮಾನಸಿಕ ಉದ್ವಿಗ್ನತೆ. ಇತರರ ಸಹಕಾರದಿಂದ  ಎಲ್ಲವೂ ನಿರಾಳವಾಗುವುದು. ಕೌಟುಂಬಿಕ ಸಹಕಾರ.

ವೃಷಭ
ನಿಮ್ಮ ದೈನಂದಿನ ವ್ಯವಹಾರದಲ್ಲಿ ಬದಲಾವಣೆ ಮಾಡಬೇಕಾದೀತು. ಇದೇವೇಳೆ, ಇತರರ ಜತೆ ಹೊಂದಾಣಿಕೆ ಅತಿ ಮುಖ್ಯ.

ಮಿಥುನ
ವೃತ್ತಿ ಸವಾಲನ್ನು ಸಮರ್ಥವಾಗಿ ನಿಭಾಯಿಸುವಿರಿ. ಆದರೆ ಕೌಟುಂಬಿಕ ಪರಿಸ್ಥಿತಿಯೇ ನಿಮಗೆ ಹೆಚ್ಚಿನ ಸವಾಲು ಒಡ್ಡಲಿದೆ.

ಕಟಕ
ಸಮಸ್ಯೆ ನಿವಾರಿಸುವಲ್ಲಿ  ಅಂತಃಪ್ರೇರಣೆಯಂತೆ  ನಡಕೊಳ್ಳಿ. ಕೆಲವರು ನಿಮ್ಮನ್ನು ದಾರಿ ತಪ್ಪಿಸಲು ಯತ್ನಿಸಬಹುದು. ಅವರ ಮಾತಿಗೆ ಕಿವಿಗೊಡಲು ಹೋಗದಿರಿ.

ಸಿಂಹ
ಹೊಸ ಯೋಜನೆಯಲ್ಲಿ ಹಣ ಹೂಡುವ ಮುನ್ನ ಎರಡೆರಡು ಬಾರಿ ಆಲೋಚಿಸಿ. ಧನನಷ್ಟ ಸಂಭವಿಸಬಹುದು. ಕೌಟುಂಬಿಕ ಒತ್ತಡದಿಂದ ಮಾನಸಿಕ ಕಿರಿಕಿರಿ.

ಕನ್ಯಾ
ಬಾಕಿ ಉಳಿದಿರುವ ಪ್ರಮುಖ ಕಾರ್ಯ ಇಂದು ಪೂರೈಸಿರಿ. ಅದನ್ನು ಇನ್ನಷ್ಟು ದೂರ ಎಳೆಯದಿರಿ. ಬಂಧುದ್ವೇಷ ವಿಕೋಪಕ್ಕೆ ಹೋದೀತು.

ತುಲಾ
ಯಾವುದೇ ಕೆಲಸ  ಅವಸರದಿಂದ ಮುಗಿಸದಿರಿ. ಅದರಿಂದ ಪ್ರಮಾದವಾದೀತು. ಎಲ್ಲವನ್ನು ಯೋಚಿಸಿ ಮುನ್ನಡೆಯಿರಿ. ಸಹನೆ ಅತಿ ಮುಖ್ಯ.

ವೃಶ್ಚಿಕ
ಕೌಟುಂಬಿಕ ಸಂಬಂಧ ಸರಿಯಾಗಿ ಇಟ್ಟುಕೊಳ್ಳಿ. ಸಣ್ಣ ವಿಷಯವೂ ಮನಸ್ತಾಪ ಸೃಷ್ಟಿಸಬಹುದು. ತಾಳ್ಮೆ ಮುಖ್ಯ. ಅತಿರೇಕದ ಪ್ರತಿಕ್ರಿಯೆ ಬೇಡ.

ಧನು
ವೃತ್ತಿ ಬದುಕು ಮತ್ತು ಖಾಸಗಿ ಬದುಕಿನ ಮಧ್ಯೆ ಹೊಂದಾಣಿಕೆ ಸಾಧಿಸಿ. ಒಂದಕ್ಕೆ ಆದ್ಯತೆ ನೀಡಿ ಮತ್ತೊಂದನ್ನು ಅಲಕ್ಷಿಸದಿರಿ. ಬಂಧುತ್ವ ಉಳಿಸಿಕೊಳ್ಳಿ.

ಮಕರ
ವೃತ್ತಿಗೆ ಸಂಬಂಧಿಸಿ ನಿರ್ಧಾರ ತಾಳುವಾಗ ಸಾಕಷ್ಟು ಯೋಚಿಸಿ. ಅವಸರದ ತೀರ್ಮಾನ ಬೇಡ. ಖಾಸಗಿ ಬದುಕಲ್ಲಿ ಸಮಸ್ಯೆ, ಅಸಮಾಧಾನ.

ಕುಂಭ
ನಿಮ್ಮ ಪ್ರಾಮಾಣಿಕ ಅನಿಸಿಕೆ ಕೆಲವರಿಗೆ ಕಹಿ ಎನಿಸಬಹುದು. ನಿಮ್ಮ ಆಕ್ರೋಶದ ಮೇಲೆ ನಿಯಂತ್ರಣವಿರಲಿ. ಸಂಘರ್ಷಕ್ಕೆ ಆಸ್ಪದ ಕೊಡದಿರಿ.

ಮೀನ
ಮನೆಯಲ್ಲಿ  ಅಭಿಪ್ರಾಯ ಭೇದ ಸಂಭವ.  ಸಂಘರ್ಷದ ಪರಿಸ್ಥಿತಿ  ದೀರ್ಘಕಾಲ ಉಳಿಸದಿರಿ. ಅದರಿಂದ ನೆಮ್ಮದಿಭಂಗ. ಸಂಯಮವಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!