ಅಮೃತಯಾತ್ರೆ: ಭಾರತದ ಮೀನುಗಾರಿಕೆ ಉದ್ಯಮ ಬೆಳೆದ ಪರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮೂರು ಕಡೆಗಳಿಂದ ವಿಶಾಲ ಸಮುದ್ರದಿಂದ ವ್ಯಾಪಿಸಿಕೊಂಡಿರೋ ಭಾರತದಲ್ಲಿ ಮೀನುಗಾರಿಕೆಯೂ ಕೂಡ ದೇಶದ ಜಿಡಿಪಿಗೆ ಕೊಡುಗೆ ನೀಡುತ್ತಿರುವ ಮುಖ್ಯ ಕಸುಬಾಗಿದೆ. ಇದಲ್ಲದೇ ಅನೇಕ ನದಿಗಳು, ಉಪನದಿಗಳಿಂದ ಆವರಿಸಕೊಂಡಿರೋ ದೇಶದ ವಿಸ್ತಾರವದಾ ಭೂಪ್ರದೇಶದಲ್ಲಿ ಒಳನಾಡು ಮೀನುಗಾರಿಕೆಯೂ ಬಹಳಷ್ಟು ನಡೆಯುತ್ತದೆ. ಇದನ್ನು ಹೊರತು ಪಡಿಸಿ ಖಾಸಗಿಯಾಗಿ ಕೃತಕ ನೀರಿನ ತೊಟ್ಟಿಗಳಲ್ಲಿಯೂ ಮೀನುಸಾಕಾಣಿಕೆ ಇತ್ತೀಚಿನ ದಿನಗಳಲ್ಲಿ ಜೋರಾಗಿಯೇ ನಡೆಯುತ್ತಿದೆ. ಪರಿಣಾಮ ಉತ್ಪಾದನೆಯೂ ಹೆಚ್ಚಿದ್ದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತವು ಮೀನುಗಾರಿಕೆಯಲ್ಲಿ ಜಗತ್ತಿಗೆ ರಫ್ತುದಾರನಾಗಿ ಹೊರಹೊಮ್ಮಿದೆ.

1961ರಲ್ಲಿ 19.9ಸಾವಿರ ಟನ್‌ ಗಳಷ್ಟಿದ್ದ ಮಿನುಗಾರಿಕಾ ರಫ್ತು ಏರಿಕೆಯಾಗಿ 2021 ಸಮಯಕ್ಕೆ 11 ಲಕ್ಷದ 68 ಸಾವಿರ ಟನ್‌ ಗಳಿಗೆ ತಲುಪಿದೆ. ಮೀನು ಮತ್ತು ಮೀನು ಉತ್ಪನ್ನಗಳು ಭಾರತದ ಒಟ್ಟಾರೆ ಕೃಷಿ ಉತ್ಪನ್ನ ರಫ್ತಿನಲ್ಲಿ 17ಶೇಕಡಾದಷ್ಟು ಕೊಡುಗೆ ನೀಡುತ್ತಿವೆ. 2020-21 ರ ಅವಧಿಯಲ್ಲಿ ಮೀನುಗಾರಿಕೆ ವಲಯವು ಭಾರತ ರಫ್ತಿನಲ್ಲಿ 44,176 ಕೊಟಿ ರೂ. ಕೊಡುಗೆ ನೀಡಿವೆ. ಮೀನುಗಾರಿಕೆಗೆ ಉತ್ತೇಜನ ನೀಡಲೆಂದೇ ಸರ್ಕಾರವು ಅನೇಕ ಯೋಜನೆ ಉಪಕ್ರಮಗಳನ್ನು ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಇತ್ಯಾದಿಗಳ ಮೂಲಕ ಮೀನುಗಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!