ದೌರ್ಜನ್ಯ ನಡೆಸಿ ಜನಾರ್ಧನ ರೆಡ್ಡಿ ಆಸ್ತಿಪಾಸ್ತಿ ಕಬಳಿಕೆ ಮಾಡಿದ್ದಾರೆ: ಅನೀಲ್ ಲಾಡ್ ಆರೋಪ

ಹೊಸದಿಗಂತ ವರದಿ, ಬಳ್ಳಾರಿ:

ಕೆಆರ್ ಪಿಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮಾತೆತ್ತಿದರೇ ನಾನು ಪ್ರಾಮಾಣಿಕ, ಯಾರದ್ದೂ ನಯಾ ಪೈಸೆ ತಿಂದಿಲ್ಲ, ಸ್ವಂತ ಬಲದಿಂದಲೇ ಮೇಲಕ್ಕೆ ಬಂದಿರುವೆ ಎಂದು ಸಭೆ ಸಮಾರಂಭಗಳಲ್ಲಿ ಹೇಳುತ್ತಿರುವುದು ನಾಚಿಗೇಡಿನ ಸಂಗತಿ, ಅಕ್ರಮ, ದೌರ್ಜನ್ಯದಿಂದ 1.40 ಕೋಟಿ ಬೆಲೆ ಬಾಳುವ ನನ್ನ ಮನೆಯನ್ನೇ ಕಬಳಿಕೆ ಮಾಡಿ ಇಲ್ಲಿವರೆಗೂ ನೈಯಾ ಪೈಸೆ ಕೊಟ್ಟಿಲ್ಲ, ಕೂಡಲೇ ಈ ಕುರಿತು ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರಿಗೆ ದೂರು ನೀಡುವೆ ಎಂದು ಮಾಜಿ ಶಾಸಕ ಅನೀಲ್ ಲಾಡ್ ಅವರು ಆರೋಪಿಸಿದರು.

ನಗರದ ವೀರನಗೌಡ ಕಾಲೋನಿಯ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನನ್ನ ಮನೆಯಷ್ಟೇ ಅಲ್ಲ, ಬಡವರ ಸಾಕಷ್ಟು ಆಸ್ತಿಪಾಸ್ತಿ, ನದಾಫ್ ಕಮೀಟಿಯ ನೂರಾರು ಎಕರೆ ಜಮೀನು, ಚಲನಚಿತ್ರ ನಟಿ ರಮ್ಯಕೃಷ್ಣ ಅವರ ನೂರಾರು ಎಕರೆ ಜಮೀನನ್ನು ಜನಾರ್ಧನ ರೆಡ್ಡಿ ಅವರು ದೌರ್ಜನ್ಯದಿಂದ ಕಬಳಿಕೆ ಮಾಡಿದ್ದಾರೆ. ಈ ಕುರಿತು ಎಲ್ಲ ದಾಖಲೆಗಳೊಂದಿಗೆ ಕೂಡಲೇ ಅಮೀತ್ ಶಾ ಹಾಗೂ ಸಿ.ಎಂ.ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡುವೆ ಎಂದು ಗಂಭೀರ ಆರೋಪ ಮಾಡಿದರು.

ಜನಾರ್ದನ ರೆಡ್ಡಿಯಿಂದ ಅಕ್ರಮ, ದೌರ್ಜನ್ಯಕ್ಕೆ ಒಳಗಾಗಿ ಆಸ್ತಿಪಾಸ್ತಿಗಳನ್ನು ಕಳೆದುಕೊಂಡವರಿದ್ದರೇ ದಾಖಲೆಗಳೊಂದಿಗೆ ಕೂಡಲೇ ಸಂಪರ್ಕಿಸಬಹುದು. ಸಾಕಷ್ಟು ಜನ ಬಡವರು, ಧ್ವನಿ ಎತ್ತದೇ ಗೌರವಾನ್ವಿತ ಜೀವನ ನಡೆಸುವವರು, ಇವರ ಸಹವಾಸವೇ ಬೇಡ ಎಂದು ಸಾಕಷ್ಟು ಜನರು ರೆಡ್ಡಿ ವಿರುದ್ದ ಧ್ವನಿ ಎತ್ತಲು ಮುಂದೆ ಬರುತ್ತಿಲ್ಲ, ನಾನೂ ಈ ಹಿಂದೆ ಧ್ವನಿ ಎತ್ತಿದಾಗ ನನ್ನ ಕಾರು, ಮನೆಯನ್ನೇ ಸುಟ್ಟು ಹಾಕಿದರು. ಆದರೂ, ಬಗ್ಗದೇ ರಾಜಕೀಯ ಜೀವನದಲ್ಲಿ ಇರುವೆ, ಇವರ ಅಕ್ರಮ ಕರ್ಮಕಾಂಡದ ಕುರಿತು ದಾಖಲೆಗಳೊಂದಿಗೆ ಅಮೀತ್ ಶಾ ಅವರಿಗೆ ದೂರು ನೀಡುವೆ ಎಂದು ಹರಿಹಾಯ್ದರು. ರೆಡ್ಡಿ ಅವರ ಅರ್ಭಟದಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಬಿ.ಶಿವಪ್ಪ ಅವರು ಅಚರ ಕೈಗೊಂಬೆಯಾಗಿದ್ದರು. ಅವಧಿಯಲ್ಲಿ ರೆಡ್ಡಿ ಎನ್ನುವ ಶಬ್ದದಲ್ಲಿ ನೊಂದಣಿ, ವ್ಯವಹಾರ, ವಹಿವಾಟು ನಡೆದಿದ್ದರೇ ಅದು ಅಕ್ರಮವೇ ಹೊರತು, ನ್ಯಾಯದಿಂದ ಅಲ್ಲವೇ ಅಲ್ಲ, ಈ ಕುರಿತು ಸಮಗ್ರ ತನಿಖೆ ಯಾಗಬೇಕು, ಎಂದು ಅಮೀತ್ ಶಾ ಅವರಲ್ಲಿ ಒತ್ತಾಯಿಸುವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!