ಹೊಸದಿಗಂತ ಆನ್ಲೈನ್ ಡೆಸ್ಕ್:
ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಧನಗೆರೆ-ಸತ್ತೇಗಾಲ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಬುಲೆರೋ ಬೈಕ್ ಮುಖಾಮುಕ್ಕಿ ಡಿಕ್ಕಿಯಾಗಿದ್ದು, ಮೂವರು ಮೃತಪಟ್ಟಿದ್ದಾರೆ.
ಬೈಕ್ ಸವಾರರಾದ ಪಳನಿಮೇಡು ಗ್ರಾಮದ ಡೇವಿಡ್,ಶೇಷರಾಜು ಹಾಗೂ ಶೆಟು ಮೃತರು. ಬೆಂಗಲೂರಿನಿಂದ ಸ್ವಗ್ರಾಮಕ್ಕೆ ಇವರು ಬೈಕ್ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.
ಬೊಲೆರೋ ಗೂಡ್ಸ್ ಗಾಡಿ ಬೈಕ್ಗೆ ಡಿಕ್ಕಿ ಹೊಡೆದಿದ್ದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.