ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪುತ್ರಿ ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕಿದ ಪ್ರಿಯಾಂಕಾ , ಜತೆಗೆ ‘ನನ್ನ ಪ್ರಕಾರ’ (I Mean) ಎಂಬ ಶೀರ್ಷಿಕೆ ನೀಡಿದ್ದಾರೆ.
ಫೋಟೋದಲ್ಲಿ ಮಗಳು ಪೂರ್ತಿ ಫೋಟೋ ಕಾಣುತ್ತಿಲ್ಲ. ಬದಲಾಗಿ ಅರ್ಧ ಮುಖ ಮಾತ್ರ ಬಹಿರಂಗಪಡಿಸಿದ್ದಾರೆ.
2018ರ ಡಿಸೆಂಬರ್ನಲ್ಲಿ ಪ್ರಿಯಾಂಕಾ ಚೋಪ್ರಾ, ಗಾಯಕ ನಿಕ್ ಜೋನಾಸ್ ಅವರೊಂದಿಗೆ ವಿವಾಹವಾಗಿದ್ದರು. 2022ರ ಜನವರಿಯಲ್ಲಿ ಪ್ರಿಯಾಂಕಾ ಚೋಪ್ರಾ-ನಿಕ್ ಜೋಡಿ ಬಾಡಿಗೆ ತಾಯ್ತತನದ ಮೂಲಕ ಮಗಳನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದರು.
ಇದೀಗ ಪ್ರಿಯಾಂಕಾ ಚೋಪ್ರಾ ತಮ್ಮ ಮಗಳ ಮುಖ ಸಂಪೂರ್ಣವಾಗಿ ಕಾಣದಂತೆ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಪ್ರಿಯಾಂಕ ಅಭಿಮಾನಿಗಳು ಖುಷಿಯಾಗಿದ್ದಾರೆ.
ಫೋಟೋ ನೋಡಿದ ಅಭಿಮಾನಿಗಳು ಮಗು ಪ್ರಿಯಾಂಕಾ ಚೋಪ್ರಾ ಹೋಲಿಕೆ ಹೊಂದಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಮಗು ಮುದ್ದಾಗಿದೆ ಎಂದು ಹೇಳುತ್ತಿದ್ದಾರೆ.