ಹೊಸದಿಗಂತ ಡಿಜಿಟಲ್ ಡೆಸ್ಕ್;
50ಕ್ಕೂ ಹೆಚ್ಚು ವಿಮಾನಗಳಿಗೆ ಇಂದು (ಸೋಮವಾರ) ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಈ ಮೂಲಕ 15 ದಿನಗಳಲ್ಲಿ ಒಟ್ಟಾರೆ 410ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಂತಾಗಿವೆ.
ಏರ್ ಇಂಡಿಯಾ ಮತ್ತು ಇಂಡಿಗೊದ ತಲಾ ಸುಮಾರು 21 ವಿಮಾನಗಳು ಮತ್ತು ವಿಸ್ತಾರಾದ 20 ವಿಮಾನಗಳಿಗೆ ಸೋಮವಾರವೂ ಬೆದರಿಕೆಗಳು ಬಂದಿವೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ಬೆದರಿಕೆ ಸಂದೇಶ ಬಂದ ಕೂಡಲೇ ನಿಯಮಗಳ ಅನ್ವಯ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಲಾಯಿತು. ಜತೆಗೆ, ಅಧಿಕಾರಿಗಳ ಸೂಚನೆಯಂತೆ ಎಲ್ಲಾ ಭದ್ರತಾ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು’ ಎಂದು ಇಂಡಿಗೊದ ವಕ್ತಾರರು ತಿಳಿಸಿದ್ದಾರೆ.