Thursday, December 8, 2022

Latest Posts

ರಾಷ್ಟ್ರಪತಿ ದ್ರೌಪದಿ ಅವರಿಗೆ ಕೌದಿ, ಸೀರೆ ಉಡುಗೊರೆಯಾಗಿ ನೀಡಿದ ಸುಧಾಮೂರ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೈಸೂರು ದಸರಾ ಉದ್ಘಾಟಿಸಿ ಧಾರವಾಡಕ್ಕೆ ತೆರಳಿದ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಅಲ್ಲಿ ಐಐಐಟಿಯ ಹೊಸ ಕ್ಯಾಂಪಸ್‌ನ್ನು ಉದ್ಘಾಟಿಸಿದರು.ಈ ವೇಳೆ ಇನ್ಪೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರು ರಾಷ್ಟ್ರಪತಿ ದ್ರೌಪದಿ ಅವರಿಗೆ ಕೌದಿ ಹಾಗೂ ಸೀರೆಯನ್ನು ಉಡುಗೊರೆಯಾಗಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಉಪಸ್ಥಿತರಿದ್ದರು.
ಮೈಸೂರಿನಲ್ಲೂ ಮೈಸೂರು ದಸರಾ ಸಮಿತಿ ದ್ರೌಪದಿ ಅವರಿಗೆ ಮೈಸೂರಿನಲ್ಲೇ ತಯಾರಿಸಿದ ಮೈಸೂರು ರೇಷ್ಮೆ ಸೀರೆಯನ್ನು ನೀಡಿದ್ದರು.
ಇದನ್ನು ದಸರಾಗೆ ಆಹ್ವಾನಿಸುವ ವೇಳೆಯೇ ರಾಷ್ಟ್ರಪತಿಗಳಿಗೆ ನೀಡಲಾಗಿತ್ತು.ಇಂದು ದಸರಾಗೆ ಆಗಮಿಸಿದ ರಾಷ್ಟ್ರಪತಿ ಅದೇ ಸೀರೆಯನ್ನು ಉಟ್ಟು ದಸರಾಗೆ ಆಗಮಿಸಿ, ಮೈಸೂರು ಸಿಲ್ಕ್ ಸೀರೆಯ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!