ಹೊಸದಿಗಂತ ವರದಿ,ಶ್ರೀರಂಗಪಟ್ಟಣ :
ಕಳೆದ ಅ.2ರ ಗಾಂಧಿ ಜಯಂತಿಯಂದು ಪಾಲಹಳ್ಳಿ ಗ್ರಾಮದ ಬಳಿ ನಡೆದ ರೌಡಿಶೀಟರ್ ವಿನೋದ್ ಆಲಿಯಾಸ್ ಕುಂಟ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಂಗ ಪಟ್ಟಣ ಟೌನ್ ಠಾಣಾ ಪೊಲೀಸರು 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಪಾಲಹಳ್ಳಿ ಗ್ರಾಮದ ವಿನೋದ್ ಮತ್ತು ಶಿವಪ್ರಸಾದ್ ನಡುವೆ ಹಳೆ ದ್ವೇಶದ ಹಿನ್ನೆಲೆಯಲ್ಲಿ ಮೇಲಿಂದ ಮೇಲೆ ಜಗಳ ನಡೆಯುತ್ತಿದ್ದು, ಕಳೆದ 2 ತಿಂಗಳ ಹಿಂದೆಯೂ ಕೂಡ ಇವರಿಬ್ಬರ ನಡುವೆ ಗಲಾಟೆ ನಡೆದಿತ್ತು ಎಂದು ತಿಳಿದು ಬಂದಿದೆ.
ಅ.2 ರಂದು ಬೆಳಿಗ್ಗೆ ವಿನೋದ್ ತನ್ನ ಫಾರ್ಮ್ ಹೌಸ್‌ಗೆ ಸ್ಕೂಟರ್‌ನಲ್ಲಿ ತೆರಳು ತ್ತಿದ್ದ ವೇಳೆ ಶಿವಪ್ರಸಾದ್ ಸೇರಿದಂತೆ 9 ಮಂದಿ ಆರೋಪಿಗಳು ಓಮಿನಿ ವಾಹನ ದಲ್ಲಿ ಬಂದು ಅಡ್ಡಗಟ್ಟಿ ವಿನೋದ್‌ನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದರು.
ನಂತರ ತೆಲೆಮರೆಸಿಕೊಂಡಿದ್ದ 9 ಮಂದಿ ಆರೋಪಿಗಳನ್ನು ಶ್ರೀರಂಗಪಟ್ಟಣ ಟೌನ್ ಠಾಣಾ ಪೊಲೀಸರು, ಜಿಲ್ಲಾ ಪೊಲೀಸ್ ವರಿಸ್ಠಾಧಿಕಾರಿ ಯತೀಶ್ ಮಾರ್ಗದರ್ಶನದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.