ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಪಕ್ಷಗಳ ಮೈತ್ರಿಕೂಟಕ್ಕೆ ವಾಪಸ್ ಬರುವುದಾದರೆ ಅವರಿಗಾಗಿ ಬಾಗಿಲುಗಳು ತೆರೆದಿವೆ ಎಂದು ಲಾಲು ಯಾದವ್ ಮಾತಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನೋ ಎಂದು ಉತ್ತರ ನೀಡಿದ್ದಾರೆ.
ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್), ಅಥವಾ JD(U), ಒಮ್ಮೆ ಲಾಲು ಯಾದವ್ ಅವರ ರಾಷ್ಟ್ರೀಯ ಜನತಾ ದಳ (RJD) ಮತ್ತು ಇತರರನ್ನು ಒಳಗೊಂಡಿರುವ ಮಹಾಮೈತ್ರಿಕೂಟದಲ್ಲಿ ಪಾಲುದಾರರಾಗಿದ್ದರು. ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಕೆಲ ಭಿನ್ನಾಭಿಪ್ರಾಯಗಳ ಕಾರಣ ಮೈತ್ರಿಕೂಟ ತೊರೆದು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಗೆ ಮತ್ತೆ ಸೇರ್ಪಡೆಗೊಂಡರು.
ಇದೀಗ ಲಾಲು ಅವರ ಆಫರ್ ನಿರಾಕರಿಸಿದ್ದ ಅವರು, ‘ಆ ತಪ್ಪು ಮಾಡಲಾರೆ’ ಎಂದು ಹೇಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನಮಗಿಂತ ಮೊದಲು ಅಧಿಕಾರದಲ್ಲಿದ್ದವರು ,ಅವರು ಏನಾದರೂ ಮಾಡಿದ್ದೀರಾ? ಸೂರ್ಯಾಸ್ತದ ನಂತರ ಜನರು ತಮ್ಮ ಮನೆಗಳಿಂದ ಹೊರಬರಲು ಭಯಪಡುತ್ತಿದ್ದರು. ನಾನು ತಪ್ಪಾಗಿ ಅವರೊಂದಿಗೆ ಒಂದೆರಡು ಬಾರಿ ಹೊಂದಾಣಿಕೆ ಮಾಡಿಕೊಂಡಿದ್ದೇನೆ ಎಂದು ನಿತೀಶ್ ಕುಮಾರ್ ಹೇಳಿದರು.
ಅಂದಿನ ಮಹಿಳೆಯರ ಸ್ಥಿತಿ ಹೇಗಿತ್ತು? ಇಂದು ನಾವು ಜೀವಿಕಾ ಎಂದು ಹೆಸರಿಟ್ಟ ಈ ಸ್ವಸಹಾಯ ಸಂಘಗಳನ್ನು ನೀವು ನೋಡಬಹುದು. ಕೇಂದ್ರವು ನಮ್ಮ ಮಾದರಿಯನ್ನು ಪುನರಾವರ್ತಿಸಿ ಅದನ್ನು ಅಜೀವಿಕ ಎಂದು ಕರೆದಿದೆ. ಅಂತಹ ಆತ್ಮವಿಶ್ವಾಸದ ಗ್ರಾಮೀಣ ಮಹಿಳೆಯರನ್ನು ನೀವು ಹಿಂದೆ ನೋಡಿದ್ದೀರಾ? ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವರ್ಷ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಿಹಾರದ ಬಿಜೆಪಿ ನಾಯಕರು ಕೂಡ ನಿತೀಶ್ ಕುಮಾರ್ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮುಖವಾಗಲಿದ್ದಾರೆ ಎಂದು ಹೇಳಿದ್ದಾರೆ.