ಹೊಸದಿಗಂತ ವರದಿ,ಅಂಕೋಲಾ:
ತಾಲೂಕಿನ ಬೆಲೇಕೇರಿ ಕಡಲ ತೀರದಲ್ಲಿ ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾಗಿದ್ದು ಮೃತ ವ್ಯಕ್ತಿಯನ್ನು ಭಾವಿಕೇರಿ ನಿವಾಸಿ ಮೋಹನ ಪೊಕ್ಕಾ ನಾಯ್ಕ (37) ಎಂದು ಗುರುತಿಸಲಾಗಿದೆ.
ಡಿಸೆಂಬರ್ 31 ರಂದು ಮದ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದ ಈತ ಮನೆಗೆ ಮರಳಿ ಬರದೇ ಇದ್ದ ಕಾರಣ ಈತನ ಸಹೋದರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಾಲೂಕಿನ ಕೇಣಿಯ ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ ತನ್ನ ಮನೆಯಿಂದ ಕಾಣೆಯಾಗಿ ಆರು ದಿನಗಳ ನಂತರ ಮೃತ ದೇಹ ಪತ್ತೆಯಾಗಿದ್ದು ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.