ಲೋಕಸಭಾ ಚುನಾವಣೆ ದೃಷ್ಠಿಯಿಂದ ಈ ರಾಜಕೀಯ ಮೈತ್ರಿ: ಮಾಜಿ ಸಚಿವ ಎನ್.ಮಹೇಶ್

ಹೊಸದಿಗಂತವರದಿ, ರಾಯಚೂರು :

ರಾಜ್ಯದಲ್ಲಿ ಬಿಜೆಪಿಯು ಲೋಕಸಭಾ ಚುನಾವಣೆ ದೃಷ್ಠಿಯಿಂದ ರಾಜಕೀಯ ಮೈತ್ರಿಯನ್ನು ಮಾಡಿಕೊಂಡಿದೆ. ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬoಧವಿಲ್ಲ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಜೊತೆ ಮೈತ್ರಿ ಅಭ್ಯರ್ಥಿಯಾಗಿರೋದು ರಾಜಕೀಯವಾಗಿ. ರಾಜಕೀಯ ಮೈತ್ರಿಯಿಂದ ಚುನಾವಣೆ ಎದುರಿಸ್ತಿದ್ದೇವೆ. ಕ್ರಿಮಿನಲ್ ಸಮಸ್ಯೆ ಅದು ಅವರ ಸಮಸ್ಯೆ ನಮ್ಮ ಸಮಸ್ಯೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಪ್ರಧಾನಮಂತ್ರಿ ಮೊಮ್ಮಗ ಅನ್ನೋದು ಎರಡನೇ ಹಂತ. ಕಾನೂನು ಮುಂದೆ ಎಲ್ಲರೂ ಒಂದೇ. ಈಗ ನಡೆಯುತ್ತಿರುವ ಕಾನೂನು ಹೋರಾಟಕ್ಕೂ ಬಿಜೆಪಿಗೂ ಯಾವುದೇ ಸಂಬoಧವಿಲ್ಲ. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂಬ ಗಾದೆ ಮಾತಿದೆ. ಉಪ್ಪು ತಿಂದವರು ನೀರು ಕುಡಿಬೇಕು ಅಂತ ಇಗಾಗಲೇ ಕುಮಾರಸ್ವಾಮಿ ಅವರೇ ಹೇಳಿದ್ದಾರೆ ಇದರಲ್ಲಿ ಬೇರೆ ಮಾತಿಲ್ಲ ಎಂದರು.

ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಗಾಗಲೇ ಎಸ್‌ಐಟಿಗೆ ಒಪ್ಪಿಸಿದೆ. ಮುಂದಿನ ಪ್ರಕ್ರಿಯೆ ಸರಕಾರ ನಡೆಸಲಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕ್ಯಾನ್ಸಲ್ ಮಾಡಿಕೊಳ್ಳುವ ಯಾವುದೇ ಸೂಚನೆಗಳಿಲ್ಲ. ಈ ರೀತಿ ಹೇಳಿಕೆಗಳನ್ನು ನೀಡುವ ಮೂಲಕ ೨ನೇ ಹಂತದ ಮತದಾನದಲ್ಲಿ ಜೆಡಿಎಸ್ ಮತಗಳು ಕಾಂಗ್ರೆಸ್ಸಿಗೆ ಬರಲಿ ಅನ್ನುವುದು ಸಚಿವ ಕೃಷ್ಣ ಬೈರೆಗೌಡರ ಆಸೆ. ಈ ಪ್ರಕರಣಕ್ಕೂ ಮತದಾನಕ್ಕೂ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.

ವೈರಲ್ ಆಗುತ್ತಿರುವ ವಿಡಿಯೋಗಳನ್ನು ಮೊದಲು ಬ್ಯಾನ್ ಮಾಡಬೇಕು ಇದರಿಮದ ಸಂತ್ರಸ್ತರಿಗೆ ಮಹಿಳೆಯರಿಗೆ ತೊಂದರೆ ಆಗುತ್ತದೆ ಎನ್ನುವುದನ್ನು ಸರ್ಕಾರ ಏಕೆ ಅರಿತುಕೊಳ್ಳಲಿಲ್ಲ. ಇದನ್ನು ತಡೆಯುವುದು ರಾಜ್ಯ ಸರಕಾರದ ಕೈಯಲಿದೆ ಕೂಡಲೇ ಕ್ರಮ ವಹಿಸಲಿ ಎಂದು ಹೇಳಿದರು.

ಈ ಹಿಂದೆ ಮನಮೋಹನ್‌ಸಿಂಗ್ ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ಮೊದಲು ಮೀಸಲು ದೊರೆಯಬೇಕು ಎಂದು ಹೇಳಿದ್ದರು. ಪ್ರಸಕ್ತ ಮುಸಲ್ಮಾನರು ಸಮುದಾಯದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳಿದ್ದಾರೆ. ಬಿಲಿಯನರುಗಳಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿಯೂ ಇದ್ದಾರೆ. ಆದರೆ, ದಲಿತ ಸಮುದಾಯದಲ್ಲಿ ಇಂತಹ ಉದ್ಯಮಗಳಲ್ಲಿ ಯಾರೂ ಇಲ್ಲ ಹೀಗಾಗಿ ದಲಿತ ಸಮುದಾಯದವರಿಗೆ ಮೊದಲು ಮೀಸಲಾತಿಯನ್ನು ನೀಡಬೇಕು ಇದು ನ್ಯಾಯವನ್ನು ಒದಗಿಸಿದಂತೆ ಆಗುತ್ತದೆ ಎಂದು ತಿಳಿಸಿದರು.

ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತದೆ ಎಂದು ಕಾಂಗ್ರೆಸ್ ಕೇಳುತ್ತಿರುವುದು ಬೇರೆ ಸಮುದಾಯಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ, ದಲಿತ ಸಮುದಾಯದವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದನ್ನು ದಲಿತ ಸಮುದಾಯ ಕಾಂಗ್ರೆಸ್ ಹೇಳಿದುದರ ಬಗ್ಗೆ ಜಾಗೃತವಾಗಬೇಕು ಎಂದು ಹೇಳಿದರು.

ಸಂವಿಧಾನ ಬದಲಾವಣೆ ಮಾಡುವುದಕ್ಕೆ ಇದೇನು ಮಗ್ಗಿ ಪುಸ್ತಕವೇ ಇಲ್ಲ ಪಠ್ಯ ಪುಸ್ತಕವೇ. ಇದು ಡಾ. ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವೇ ನಮಗೆ ಧರ್ಮ ಗ್ರಂಥ ಎಂದು ಬಿಜೆಪಿ ಸ್ಪೊಷ್ಟಪಡಿಸಿದೆ. ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದ ಸಂಸದ ಅನಂತಕುಮಾರ ಹೆಗಡೆ ಅವರಿಂದ ಲೋಕಸಭೆಯಲ್ಲಿ ಸಭಾಪತಿಗಳು ಕ್ಷಮೆಯನ್ನು ಕೇಳಿಸಿದ್ದಾರೆ. ಹೀಗಿರುವಾಗ ಬಿಜೆಪಿ ಹೇಗೆ ಸಂವಿಧಾನವನ್ನು ಬದಲಾಯಿಸಲು ಸಾಧ್ಯ ಇದು ಜನತೆಯನ್ನು ದಾರಿತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ರವೀಂದ್ರ ಜಲದಾರ, ಯಲ್ಲಪ್ಪ, ಕೆ.ಎಂ.ಪಾಟೀಲ, ಭುವನೇಶ್ವರಿ, ಶ್ರೀನಿವಾರ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!