Thursday, December 8, 2022

Latest Posts

SHOCKING NEWS | ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದಾಗ್ಲೇ ಹೃದಯಾಘಾತ: ನಟ ಸಿದ್ಧಾಂತ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಹಿಂದಿ ಕಿರುತೆರೆಯ ನಟ ಸಿದ್ಧಾಂತ್ ವೀರ ಸೂರ್ಯವಂಶಿ ಜಿಮ್ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಸಿದ್ಧಾಂತ್‌ಗೆ ಕೇವಲ 46 ವರ್ಷ. ಮುಂಬೈನಲ್ಲಿ ನೆಲೆಸಿದ್ದ ಸಿದ್ಧಾಂತ್‌, ಜನಪ್ರಿಯ ಹಿಂದಿ ಧಾರಾವಾಹಿ ಕಸೌಟಿ ಜಿಂದಗಿ ಕೇ ಸೇರಿದಂತೆ ಅನೇಕ ಸೀರಿಯಲ್‌ಗಳಲ್ಲಿ ನಟಿಸಿದ್ದರು.

ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಏಕಾಏಕಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಗೆ ಬರುವ ದಾರಿಯಲ್ಲೇ ಸಿದ್ಧಾಂತ್ ಪ್ರಾಣ ಹೋಗಿದೆ ಎಂದು ಹೇಳಲಾಗುತ್ತಿದೆ.

2017ರಲ್ಲಿ ಈತ ಎರಡನೇ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. 2022ರಲ್ಲಿ ‘ಜಿದ್ದಿ ದಿಲ್ ಮಾನೆ ನಾ’ ಧಾರಾವಾಹಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಕುಸುಮ್‌, ವಾರಿಸ್‌, ಸೂರ್ಯಪುತ್ರ ಕರ್ಣ್‌ ಸೇರಿದಂತೆ ಅನೇಕ ಜನಪ್ರಿಯ ಧಾರಾವಾಹಿಯಲ್ಲಿ ಸಿದ್ಧಾಂತ್‌ ಅಭಿನಯಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!