Thursday, October 6, 2022

Latest Posts

ಸಂಘ ನಿಕೇತನ ಗಣೇಶೋತ್ಸವಕ್ಕೆ 75: ಅಮೃತ ಮಹೋತ್ಸವ ಸಂಭ್ರಮಕ್ಕೆ ಮುಕುಂದ್ ಜೀ ಚಾಲನೆ

ಮಂಗಳೂರು: ನಗರದ ಮಣ್ಣಗುಡ್ಡೆ ಯಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಈ ಬಾರಿ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಅಮೃತ ಮಹೋತ್ಸವ ಸಂಭ್ರಮ!
ಆ.31 ರಿಂದ ಸೆ.4 ರವರೆಗೆ ಗಣೇಶೋತ್ಸವ ನಡೆಯಲಿದ್ದು, ಸಾರ್ವಜನಿಕ ಗಣೇಶೋತ್ಸವ ಉದ್ಘಾಟನೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರ ಕಾರ್ಯವಾಹ ಮುಕುಂದ್ ನೆರವೇರಿಸಿದರು.

ಧ್ವಜಾರೋಹಣ, ವಂದೇ ಮಾತರಂ ಉದ್ಘಾಟಕರ ಸಂದೇಶ, ಸಭಾಕಾರ್ಯಕ್ರಮ ನಡೆಯಿತು. ಗಣಹೋಮ ಬಳಿಕ ಸಂಜೆ ಹರಿನಾಮ ಸಂಕೀರ್ತನೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು ರಾತ್ರಿ ಮೂಡಗಣಪತಿ ಸೇವೆ ಹಾಗೂ ರಂಗ ಪೂಜೆ ನಡೆದವು.

ಈ ಸಂದರ್ಭ ಸಂಘ ಚಾಲಕ ಡಾ. ವಾಮನ್ ಶೆಣೈ, ಸುನಿಲ್ ಆಚಾರ್, ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಗೌರವ ಅಧ್ಯಕ್ಷ ಪಿ. ರವೀಂದ್ರ ಪೈ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ಸತೀಶ್ ಪ್ರಭು , ಸುರೇಶ ಕಾಮತ್, ಜೀವನರಾಜ್ ಶೆಣೈ, ಉಪಾಧ್ಯಕ್ಷರಾದ ಜೆ .ಕೆ. ರಾವ್, ಆನಂದ ಪಾಂಗಳ, ಕೆ.ಪಿ. ಟೈಲಾರ್, ಅಭಿಷೇಕ್ ಭಂಡಾರಿ, ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ವಿನೋದ್ ಶೆಣೈ, ರಘುವೀರ್ ಕಾಮತ್, ಎಸ್.ಆರ್. ಕುಡ್ವ, ಗಣೇಶ್ ಪ್ರಸಾದ್, ಜಯಪ್ರಕಾಶ್ ಮಂಗಳಾದೇವಿ, ಸ್ವಾಮಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ: ಮಂಜು ನೀರೇಶ್ವಾಲ್ಯ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!