ಸನಾತನ ಹಿಂದೂ ಧರ್ಮದ ಬಗ್ಗೆ ಯುವಕರಲ್ಲಿ ಹೆಚ್ಚು ಜಾಗೃತಿ ಅಗತ್ಯ: ಶ್ರೀ ವಿಜಯಾನಂದ ತೀರ್ಥಸ್ವಾಮಿ

ಹೊಸ ದಿಗಂತ ವರದಿ , ಮೈಸೂರು :

ಸನಾತನ ಹಿಂದೂ ಧರ್ಮದ ಬಗ್ಗೆ ಯುವಕರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ ಎಂದು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ವಿಜಯಾನಂದ ತೀರ್ಥ ಸ್ವಾಮಿ ಹೇಳಿದರು.

ವಿಶ್ವ ಹಿಂದೂ ಪರಿಷತ್, ಬಜರಂಗ ದಳದಿಂದ ನಡೆಯುತ್ತಿರುವ ಶೌರ್ಯ ಜಾಗರಣ ರಥಯಾತ್ರೆ ಗುರುವಾರ ಗಣಪತಿ ಸಚ್ಚಿದಾನಂದ ಆಶ್ರಮ ತಲುಪಿದ ವೇಳೆ ಜಾನಪದ ಕಲಾತಂಡದೊಂದಿಗೆ ಭವ್ಯ ಸ್ವಾಗತ ಕೋರಲಾಯಿತು. ಶ್ರೀ ದತ್ತ ವಿಜಯಾನಂದ ಸ್ವಾಮಿ ರಥವನ್ನು ಸ್ವಾಗತಿಸಿ ಮಾತನಾಡಿ, ನಮ್ಮ ಹಿಂದೂ ಧರ್ಮವನ್ನು ನಾವು ಎಂದಿಗೂ ಮರೆಯಬಾರದು, ನಮ್ಮ ಧರ್ಮದ ಬಗ್ಗೆ ಯುವ ಜನರಲಿ ಇನ್ನೂ ಹೆಚ್ಚು ತಿಳುವಳಿಕೆ ಮೂಡಿಸಬೇಕು. ಧರ್ಮ ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ. ದೇಶ ಚೆನ್ನಾಗಿರಬೇಕೆಂದರೆ ಜನರು ಚೆನ್ನಾಗಿರಬೇಕು, ಜನರಲ್ಲಿ ಸಾಮರಸ್ಯತೆ ಇರಬೇಕು ಎಂದು ಹೇಳಿದರು.

ಎಲ್ಲರಲ್ಲೂ ನಮ್ಮ ಸನಾತನ ಧರ್ಮದ ಬಗ್ಗೆ ಅರಿವು ಉಂಟಾಗಬೇಕು ನಮ್ಮ ಧರ್ಮವನ್ನು ಕಾಪಾಡಿಕೊಳ್ಳಲು ನಾವು ಪ್ರಯತ್ನ ಮಾಡೋಣ, ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಹೊರಟಿರುವ ಈ ರಥ ದಿಗ್ವಿಜಯ ಸಾಧಿಸಲಿ, ನಿರ್ವಿಘ್ನವಾಗಿ ಸಾಗಲಿ ಎಂದು ಶ್ರೀಗಳು ಶುಭ ಹಾರೈಸಿದರು.

ಈ ವೇಳೆ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಟಿ.ಪ್ರಕಾಶ್, ಬಜರಂಗದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ, ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮಧುಶಂಕರ್, ಪರಿಷತ್‌ನ ಕಾನೂನು ವಿಭಾಗದ ಪ್ರಮುಖ್ ಅಂಬಿಕಾ, ಜಿಲ್ಲಾ ಮಹಿಳಾ ಘಟಕದ ಪ್ರಮುಖ್ ಸವಿತಾ ಘಾಟ್ಕೆ, ಜಿಲ್ಲಾ ಪ್ರಮುಖ್ ಲೋಕೇಶ್, ಮಠ ಮಂದಿರ ಪ್ರಮುಖ್ ಜನಾರ್ಧನ್ ಮತ್ತಿತರರು ಹಾಜರಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!