Friday, September 30, 2022

Latest Posts

ಸರ್ವಿಕಲ್ ಕ್ಯಾನ್ಸರ್ ರೋಗಿಗಳಿಗೆ ಶುಭಸುದ್ದಿ: ಬರುತ್ತಿದೆ ದೇಶದ ಮೊದಲ ಹೊಸಾ ಲಸಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ವಿಕಲ್ ಕ್ಯಾನ್ಸರ್ ರೋಗಿಗಳಿಗೆ ಶುಭಸುದ್ದಿ ಹೊರಬಿದ್ದಿದೆ.
ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಅಭಿವೃದ್ಧಿಪಡಿಸಿರುವ ದೇಶದ ಮೊದಲ ಲಸಿಕೆ, ಕ್ವಾಡ್ರೈವೆಲೆಂಟ್ ಹ್ಯೂಮನ್ ಪ್ಯಾಪಿಲೋಮ ವೈರಸ್ ನಾಳೆ (ಸೆ.1)ಯಿಂದ ಬಳಕೆಗೆ ಲಭ್ಯವಾಗಲಿದೆ.
ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದ್ದು, ಲಸಿಕೆಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ಬಿಡುಗಡೆ ಮಾಡಲಿದ್ದಾರೆ.
ಏನಿದು ಸರ್ವಿಕಲ್ ಕ್ಯಾನ್ಸರ್?
ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಖಾಯಿಲೆಯಾಗಿದೆ. ಗರ್ಭಕೋಶದ ಕೆಳಭಾಗದಲ್ಲಿರುವ ಗರ್ಭನಾಳದಲ್ಲಿ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಗರ್ಭನಾಳವು ಗರ್ಭಕೋಶ ಹಾಗೂ ಯೋನಿಯ ಮಧ್ಯದ ಸಂಪರ್ಕ ಸೇತುವಾಗಿದ್ದು ಈ ಭಾಗದಲ್ಲಿ ಇದು ಅಪಾಯವನ್ನುಂಟುಮಾಡುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!