Thursday, October 6, 2022

Latest Posts

ಸಾರಿಗೆ ಸಚಿವರಿಂದ ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಶೀಘ್ರ 2814 ಚಾಲಕರ ಹುದ್ದೆಗಳ ನೇಮಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚಾಲಕ ಹುದ್ದೆ ಉದ್ಯೋಗಾಂಕ್ಷಿಗಳಿಗೆ ಸಾರಿಗೆ ಸಚಿವರು ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ 2814 ಚಾಲಕರ ಹುದ್ದೆಗಳ ನೇಮಕ ಮಾಡಲಾಗುತ್ತದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಶಾಸಕ ಲಿಂಬಣ್ಣನವರ ಪ್ರಶ್ನೆಗೆ ಉತ್ತರಿಸಿದ ಅವರು, 2814 ಚಾಲಕರು ಹಾಗೂ ಇದರ ಜೊತೆ ಹೆಚ್ಚುವರಿಯಾಗಿ 250 ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ , ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಚಾಲಕರನ್ನು ನೇಮಿಸಿಕೊಳ್ಳಲಾಗುವುದು ಎಂದರು.

ಸದ್ಯ ಸಂಸ್ಥೆಯಲ್ಲಿ 2500 ಚಾಲಕ, 55 ಚಾಲಕರು ( ಬ್ಯಾಕ್ ಲಾಗ್ ) , 250 ಚಾಲಕ ಕಂ ನಿರ್ವಾಹಕ ( ಬ್ಯಾಕ್ ಲಾಗ್ ) ಸೇರಿದಂತೆ ಒಟ್ಟು 2814 ಹುದ್ದೆಗಳ ನೇಮಕಕ್ಕೆ 2019 ರಲ್ಲೇ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ನೇಮಕಾತಿ ಪ್ರಕ್ರಿಯೆಗೆ ಪ್ರಸ್ತಾವನೆ ಸ್ವೀಕೃತಗೊಂಡಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!