ಸಾಫ್ಟ್‌ವೇರ್‌ ಇಂಜಿನಿಯರ್‌ಗಳನ್ನು ಮ್ಯಾಟ್ರಿಮೋನಿಯಲ್ ಜಾಹೀರಾತಿನಲ್ಲಿ ‘ರಿಜೆಕ್ಟ್’ ಮಾಡಿದ ಯುವತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮದುವೆಯಾಗೋದಕ್ಕೆ ವರ, ವಧುಗಳನ್ನು ಹುಡುಕಾಟಕ್ಕೆ ಇದೀಗ ಪೇಪರ್‌ಗಳಲ್ಲಿ ಜಾಹೀರಾತು ನೀಡುವುದನ್ನು ನೋಡಿರಬಹುದು . ಅದೇ ರೀತಿಯ ಈ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡಿದೆ. ಎಂಬಿಎ ವಿದ್ಯಾಭ್ಯಾಸ ಮಾಡಿರುವ 24 ವರ್ಷದ ಸುಂದರ ಯುವತಿಗೆ ವರ ಬೇಕಂತೆ.

ಬಿಸಿನೆಸ್‌ ಕುಟುಂಬದ ಶ್ರೀಮಂತ ಯುವತಿ ಆಕೆ. ‘ಐಎಎಸ್‌/ಐಪಿಎಸ್‌ ಅಧಿಕಾರಿಗಳು, ವೈದ್ಯರು, ಉದ್ಯಮಿಗಳು ಯುವತಿಯನ್ನು ಮದುವೆಯಾಗಲು ಮುಂದೆ ಬರಬಹುದು. ಆದರೆ, ಸಾಫ್ಟ್ ವೇರ್‌ ಇಂಜಿನಿಯರ್‌ಗಳು ದಯವಿಟ್ಟು ಕರೆ ಮಾಡಬೇಡಿ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.
ಇಂಜಿನಿಯರ್‌ಗಳಿಗಿದ್ದ ಈ ವಿಶೇಷ ಸೂಚನೆಯು ಅನೇಕರ ಕಣ್ಣಿಗೆ ಬಿದ್ದಿದೆ. ಇದು ವೈರಲ್‌ ಆಗಿದ್ದು, ‘ಇಂಜಿನಿಯರ್‌ಗಳ ಭವಿಷ್ಯ ಇಷ್ಟೇ ಅಂತ ಹೇಳುತ್ತಿದ್ದಾರೆ ನೆಟ್ಟಿಗರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!