Wednesday, December 7, 2022

Latest Posts

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರನ್ನು ಗಮನ ಸೆಳೆದ ಈ ಅತೀ ಉದ್ದ ಮೂಗಿನ ವ್ಯಕ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರನ್ನು ದಿನ ಒಂದಲ್ಲ ಒಂದು ವಿಭಿನ್ನ ಚಿತ್ರಗಳು ಸೆಳೆಯುತ್ತಿದ್ದು, ಇದೀಗ ಅತಿ ಉದ್ದದ ಮೂಗನ್ನು ಹೊಂದಿರುವ ವ್ಯಕ್ತಿಯ ಫೋಟೋ ವೈರಲ್ ಆಗುತ್ತಿದೆ.

ಹಿಸ್ಟಾರಿಕ್ ವಿಡ್ಸ್ (Historic Vids) ಎಂಬ ಟ್ವಿಟರ್ ಪೇಜ್‍ನಲ್ಲಿ, ಬಿಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ (Believe It Or Not Museum) ಇರಿಸಲಾಗಿರುವ ವ್ಯಕ್ತಿಯ ತಲೆಯ ಫೋಟೋವನ್ನು ಪೋಸ್ಟ್ ಮಾಡಲಾಗಿದೆ.

ಥಾಮಸ್ ವಾಡ್‍ಹೌಸ್ ಅವರ ಮೂಗು 7.5 ಇಂಚು ಉದ್ದವಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‍ಸೈಟ್‍ನ ಪೇಜ್‍ನಲ್ಲಿ ಈ ವ್ಯಕ್ತಿಯ ಹೆಸರಿದೆ. ಅಲ್ಲದೇ ಈತನೊಬ್ಬ “ಟ್ರಾವೆಲಿಂಗ್ ಫ್ರೀಕ್ ಸರ್ಕಸ್‍ನ ಸದಸ್ಯ ಎಂದು ತಿಳಿಸಲಾಗಿದೆ.

ಥಾಮಸ್ ವಾಡ್‍ಹೌಸ್ ಒಬ್ಬರು ಇಂಗ್ಲಿಷ್ ಸರ್ಕಸ್ ಕಲಾವಿದರಾಗಿದ್ದರು. 7.5 ಇಂಚುಗಳಷ್ಟು (19 ಸೆಂ) ಉದ್ದದ ಮೂಗನ್ನು ಹೊಂದುವ ಮೂಲಕ ವಿಶ್ವದಲ್ಲಿ ಅತೀ ಹೆಚ್ಚು ಜನಪ್ರಿಯರಾಗಿದ್ದರು.

1770ರ ದಶಕದಲ್ಲಿ ಥಾಮಸ್ ವಾಡ್‍ಹೌಸ್ ಅವರು, ಇಂಗ್ಲೆಂಡ್‍ನಲ್ಲಿ ವಾಸಿಸುತ್ತಿದ್ದರು ಮತ್ತು ಟ್ರಾವೆಲಿಂಗ್ ಫ್ರೀಕ್ ಸರ್ಕಸ್‍ನ ಸದಸ್ಯರಾಗಿದ್ದರು. ಥಾಮಸ್ ವಾಡ್‍ಹೌಸ್ 19 ಸೆಂ (7.5 ಇಂಚುಗಳಷ್ಟು) ಮೂಗು ಹೊಂದುವ ಮೂಲಕ ಗೆನ್ನಿಸ್ ರೆಕಾರ್ಡ್ ಮಾಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!