ಹಷ೯ ಹತ್ಯೆ: ಕಲಬುರಗಿಯಲ್ಲಿ ಪ್ರತಿಭಟನೆ

ಹೊಸದಿಗಂತ ವರದಿ,ಕಲಬುರಗಿ:

ಶಿವಮೊಗ್ಗದ ಬಜರಂಗದಳ ಕಾಯ೯ಕತ೯ ಹಷ೯ ಅವರ ಬಬ೯ರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಮತಾಂಧ ಮುಸ್ಲಿಂ ಯುವಕರನ್ನು ತಕ್ಷಣವೇ ಗಲ್ಲಿಗೇರಿಸಬೇಕೆಂದು ಹಿಂದೂ ರಕ್ಷಕ ಶಿವಾಜಿ ಬ್ರಿಗೇಡ್,ನ ಅಧ್ಯಕ್ಷ ಗುರುಶಾಂತ ಟೆಂಗಳಿ ಆಗ್ರಹಿಸಿದರು.

ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ,ಜಿಲ್ಲಾಧಿಕಾರಿ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದ ಮಾತನಾಡಿದರು.

ರಾಜ್ಯದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸುತ್ತಿರುವ ಎಸ್.ಡಿ.ಪಿ.ಐ,ಪಿ.ಎಫ್.ಐ ಮತ್ತು ಇನ್ನೀತರ ದೇಶದ್ರೋಹಿ ಸಂಘಟನೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಹೇಳಿದರು.

ಸೀಗೆಹಟ್ಟಿಯಲ್ಲಿ 26 ವಷ೯ದ ಯುವಕನಾದ ಹಾಗೂ ಬಜರಂಗದಳ ಕಾಯ೯ಕತ೯ನಾದ ಹಷಾ೯ ಅವರನ್ನು ಬಬ೯ರವಾಗಿ ಕೊಲೆ ಮಾಡಿದ ಮುಸ್ಲಿಂ ಯುವಕರಲ್ಲಿ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಇವರನ್ನು ವಿಚಾರಣೆಗೈದು ಗಲ್ಲಿಗೇರಿಸಬೇಕು ಎಂದು ಹೇಳಿದರು.

ಬಿಜೆಪಿ ಪಕ್ಷವು ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಸಕಾ೯ರ ಬಂದ ಕೆಲವೇ ದಿನಗಳಲ್ಲಿ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವುದಾಗಿ ಭರವಸೆ ನೀಡಿತ್ತು.ಇದೀಗ ಬಿಜೆಪಿ ಆಡಳಿತ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದಿದ್ದು, ಕೊಟ್ಟ ಮಾತಿನಂತೆ ನಡೆಯಬೇಕೆಂದು ನೆನಪಿಸಿದರು.

ಹಿಂದೂ ಸಂಘಟನೆಯ ಕಾಯ೯ಕತ೯,ನಾಯಕರನ್ನು ರಕ್ಷಣೆ ಒದಗಿಸಬೇಕು. ಹತ್ಯೆಗೊಳಗಾದ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು. ಒಂದು ವೇಳೆ ಬೇಡಿಕೆಗಳನ್ನು ಇಡೇರಿಸದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಹಿಂದೂ ಸಮಾಜ ಜಾಗೃತವಾಗಿ ರಾಜ್ಯ ಸರ್ಕಾರದ ವಿರುದ್ಧ ಧಂಗೆ ಎಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶಿವರಾಜ್ ಬಾಳಿ, ಸುರೇಶ ತಳವಾರ, ಶಾಂತವೀರ ಸಾಲಿಮಠ, ಧನರಾಜ ಡೋಂಗರೆ,ಕಿರಣ ಖೇಳೆಗಾಂವಕರ, ರಾಘವೇಂದ್ರ ಗುಂಜೋಟಿ ಸೇರಿದಂತೆ ಹಲವು ಬ್ರಿಗೇಡ್, ನ ಕಾಯ೯ಕತ೯ರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!