ಡಿಕೆಶಿಯಲ್ಲ ಯಾರೇ ರಾಮನಗರದಿಂದ ಸ್ಪರ್ಧಿಸಲಿ ಎದರಿಸಲು ನಾವ್ ರೆಡಿ: ನಿಖಿಲ್ ಕುಮಾರಸ್ವಾಮಿ

ಹೊಸದಿಗಂತ ವರದಿ,ರಾಮನಗರ:

ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಡಿ.ಕೆ.ಶಿವಕುಮಾರ್ ಅವರಲ್ಲ ಯಾರೇ ಅಭ್ಯರ್ಥಿಯಾದರೂ ನಾವು ಎದುರಿಸಲು ಸಿದ್ದರಿದ್ದೇವೆ ನಾವು ಯಾವುದಕ್ಕೂ ಜಗ್ಗುವುದಿಲ್ಲ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಕನಕಪುರ ತಾಲ್ಲೂಕಿನ ಜುಟ್ಟೇಗೌಡನವಲಸೆ ಗ್ರಾಮದಲ್ಲಿ ದೇವಾಲಯದ ಲೋಕಾರ್ಪಣೆಯಲ್ಲಿ ಪಾಲ್ಗೊಂಡಿದ್ದ ಅವರು, ಸುದ್ದಿಗಾರರ ಜೊತೆ ಮಾತನಾಡಿ,ಯಾರೇ ಚುನಾವಣೆಗೆ ನಿಂತರೂ ನಾವೂ ಎದುರಿಸಲು ಸಿದ್ದ. ಅಧಿವೇಶನ ಮುಗಿದ ನಂತರ ನಮ್ಮ ನಾಯಕರಾದ ಕುಮಾರಣ್ಣ ಮತ್ತು ನಾವು ಪ್ರವಾಸ ಕೈಗೊಳ್ಳಲಿದ್ದು, ಹಳ್ಳಿಗಳ ಸಮಸ್ಯೆ ಮತ್ತು ಕಾರ್ಯಕರ್ತರ ಭೇಟಿ ಮಾಡಿ ಮುಂದಿನ ರೂಪುರೇಷೆ ಮಾಡಲಾಗುವುದೆಂದರು.
ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕರಾದ ನಮ್ಮ ತಾಯಿ ಈ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಇನ್ನು ಮಾಡುತಲಿದ್ದು ಅದು ನಮ್ಮ ಕೈ ಹಿಡಿಯಲಿದೆ. ಯುವಜನತೆ ಮತ್ತು ಕಾರ್ಯಕರ್ತರು ನಮ್ಮ ಭೇಟಿಗಾಗಿ ನಾವೇ ದೇವಾಲಯದ ಕಾರ್ಯಕ್ರಮಕ್ಕೆ ಬರಲು ಆಸೆ ಪಟ್ಟಿದ್ದರಿಂದ ಜೊತೆಗೆ ನನಗೂ ಇವರ ಜೊತೆ ನಾನು ಭೇಟಿಯಾಗಿ ಅಹವಾಲು ಸ್ವೀಕರಿಸುವುದಕ್ಕಾಗಿ ಬಂದಿದ್ದೇನೆ ಹಳ್ಳಿಗಳ ಟೂರ್ ಮಾಡಲಾಗುವುದು ಎಂದು ತಿಳಿಸಿದರು.
ರಾಮನಗರ ಕ್ಷೇತ್ರಕ್ಕೆ ನಾನು ಅಭ್ಯರ್ಥಿಯಾಗಬೇಕು ಅನ್ನುವುದನ್ನು ಹೈಕಮಾಂಡ್ ಆ ಸಮಯದಲ್ಲಿ ತೀರ್ಮಾನಿಸಲಿದೆ ಮುಂದೆ ನೋಡೋಣವೆಂದರು.
ಆರ್ಥಿಕ ನೆರವು :
ಜುಟ್ಟೇಗೌಡನವಲಸೆ ಗ್ರಾಮದಲ್ಲಿ ದೇವಾಲಯದ ಲೋಕಾರ್ಪಣೆಯಲ್ಲಿ ಪಾಲ್ಗೊಂಡಿದ್ದ ಅವರು, ಸುದ್ದಿಗಾರರ ಜೊತೆ ಮಾತನಾಡಿ, ಜೆಡಿಎಸ್ ಕಾರ್ಯಕರ್ತ ರಮೇಶ್ ನಿಧನರಾದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ 1 ಲಕ್ಷ ರೂ.ಗಳ ವೈಯಕ್ತಿಕ ನೆರವು ನೀಡಿದರು. ಹಾಗೂ ಅವರ ಪತ್ನಿಗೆ ಯಾವುದಾದರೂ ಕೆಲಸ ಕೊಡಿಸುವುದಾಗಿ ಹಾಗೂ ಮಗಳ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಗುವುದೆಂದು ಭರವಸೆ ನೀಡಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!