ಹೊಸದಿಗಂತ ವರದಿ, ಮಂಡ್ಯ :
ಭಾರತೀಯರಾಗಿ ನಾವು ಎಲ್ಲವನ್ನೂ ಒಪ್ಪುತ್ತೇವೆ. ಹಿಂದುತ್ವವನ್ನು ನಾವು ಸ್ವೀಕರಿಸಿದ್ದೇವೆ. ಆದರೆ, ನಮ್ಮ ವಿರುದ್ಧವೇ ತಿರುಗಿ ನಿಂತಾಗ ನಾವೂ ತಿರುಗಿಬೀಳಬೇಕಾಗುವುದು ಅನಿವಾರ್ಯವಾಗಲಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಅವರು ವಿವೇಕಾನಂದರ ಒಂದು ಘಟನೆಯನ್ನು ನೆನಪಿಸಿ ಹೇಳಿದರು.
If it is against Hinduism, it is inevitable to turn away: Yadhuveer
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಗ್ಗಹಳ್ಳಿಯಲ್ಲಿ ನಡೆದ ಜಿಪಂ ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮೈಸೂರು ಮಹಾರಾಜರು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಆಸ್ತಿಯನ್ನು ಆ ಕಾಲದಲ್ಲಿ ನೀಡಿರಬಹುದು. ಅದನ್ನೆಲ್ಲಾ ವಕ್ಫ್ ಆಸ್ತಿ ಎನ್ನಲು ಹೇಗೆ ಸಾಧ್ಯ. ದೇಗುಲ, ಶಾಲೆಗಳಿಗೆ ಸೇರಿದ ಜಾಗದ ಪಹಣಿಯಲ್ಲೂ ವಕ್ಫ್ ಎಂದು ನಮೂದಾಗಿದೆ. ಬಡ ರೈತರ ಜಮೀನು ಕೂಡ ವಕ್ಫ್ ಪಾಲಾಗುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನಿರಬಾರದು. ಎಲ್ಲರೂ ಧರ್ಮದ ಪರವಾಗಿ ನಿಲ್ಲುವುದಕ್ಕೆ ಸಜ್ಜಾಗಬೇಖು ಎಂದು ಹೇಳಿದರು.