ಇರಾನ್​​ನ ಹಿರಿಯ ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ ಹತ್ಯೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇರಾನ್​​ನ ಹಿರಿಯ ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ (Abbas-Ali Soleimani) ಅವರನ್ನು ಹತ್ಯೆ ಮಾಡಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಇರಾನ್​​ನಲ್ಲಿ ನಡೆದ​​ ದಾಳಿಯಲ್ಲಿ ಇರಾನ್ ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ ಹತ್ಯೆಯಾಗಿದ್ದಾರೆ ಎಂದು ಹೇಳಲಾಗಿದೆ.

ಅಬ್ಬಾಸ್-ಅಲಿ ಸೊಲೈಮಾನಿ ಹತ್ಯೆಯಾದಾಗ ಬ್ಯಾಂಕ್‌ನೊಳಗಿದ್ದರು. ಅಪರಿಚಿತ ವ್ಯಕ್ತಿಯೊಬ್ಬ ಬಂದು ಬ್ಯಾಂಕ್ ಗಾರ್ಡ್​​ನಿಂದ ಕಾವಲುಗಾರನ ಬಂದೂಕನ್ನು ಕಸಿದುಕೊಂಡು ಅಯತೊಲ್ಲಾ ಅಬ್ಬಾಸ್-ಅಲಿ ಸೊಲೈಮಾನಿ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಅಬ್ಬಾಸ್-ಅಲಿ ಸೊಲೈಮಾನಿ ಅವರು ದೇಶದ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವ ತಜ್ಞರ ಸಭೆಯ ಸದಸ್ಯರಾಗಿದ್ದರು. ಇರಾನ್ ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ ಅವರ ಮೇಲೆ ಬುಧವಾರದಂದು ಉತ್ತರ ಪ್ರಾಂತ್ಯದ ಮಜಂದರಾನ್‌ನ ಬಾಬೋಲ್ಸರ್ ನಗರದಲ್ಲಿ ದಾಳಿ ನಡೆದಿದೆ. ದಾಳಿ ನಡೆದ ಕೂಡಲೇ ದಾಳಿ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!