ಮುಸ್ಲಿಮರ 2ಬಿ ಮೀಸಲಾತಿ ರದ್ದು ನಿರ್ಧಾರವನ್ನು ಸಮರ್ಥಿಸಿಕೊಂಡ ರಾಜ್ಯ ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಸ್ಲಿಮರ (Muslim) 2ಬಿ ಮೀಸಲಾತಿ (2B Reservation) ರದ್ದು ನಿರ್ಧಾರವನ್ನು ರಾಜ್ಯ ಸರ್ಕಾರ (Karnataka Government) ಸಮರ್ಥಿಸಿಕೊಂಡಿದೆ.

ನಿನ್ನೆ (ಏ.27) ಸುಪ್ರೀಂಕೋರ್ಟ್ (Supreme court)​ ರಾಜ್ಯ ಸರ್ಕಾರದ 2ಬಿ ಮೀಸಲಾತಿ ರದ್ದು ಆದೇಶಕ್ಕೆ ತಡೆ ನೀಡಿತ್ತು. ಈ ಹಿನ್ನೆಲೆ ಸುಪ್ರೀಂಕೋರ್ಟ್​​ಗೆ ಸರ್ಕಾರ ಅಫಿಡವಿಟ್​​ ಸಲ್ಲಿಸಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಸಂವಿಧಾನ ಬಾಹಿರ. ಸಂವಿಧಾನದ 14, 15 ಮತ್ತು 16ನೇ ವಿಧಿ ಮತ್ತು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ತತ್ವಗಳ ಆದೇಶಕ್ಕೆ ವಿರುದ್ಧವಾಗಿದೆ. ಈ ಹಿಂದೆ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಒದಗಿಸಲಾಗಿದೆ ಎಂಬ ಕಾರಣಕ್ಕಾಗಿ ಅದನ್ನೆ ಶಾಶ್ವತವಾಗಿ ಮುಂದುವರೆಸಲು ಸಾಧ್ಯವಿಲ್ಲ ಎಂದು ಸರ್ಕಾರ ಅಫಿಡವಿಟ್​​ನಲ್ಲಿ ಹೇಳಿದೆ.

ಮೀಸಲಾತಿಗಳನ್ನು ನೀಡುವುದು ಮತ್ತು ಅದರ ಪರಿಷ್ಕೃರಣೆ ಸಂಪೂರ್ಣವಾಗಿ ನೆಲದ ವಾಸ್ತವಗಳ ಮೇಲೆ ಅವಲಂಬಿತವಾದ ಕಾರ್ಯವಾಗಿದೆ. ಯಾವ ಗುಂಪನ್ನು ಹಿಂದುಳಿದ ವರ್ಗ ಎಂದು ಪರಿಗಣಿಸಬೇಕು ಮತ್ತು ಅವರಿಗೆ ಯಾವ ಪ್ರಯೋಜನಗಳು ನೀಡಬೇಕು ಎನ್ನುವುದು ಪ್ರತಿ ರಾಜ್ಯದ ಸಾಂವಿಧಾನಿಕ ಕರ್ತವ್ಯವಾಗಿದೆ. ಮುಸ್ಲಿಮರನ್ನು ಹಿಂದುಳಿದವರೆಂದು ಸೇರಿಸಲು ಆಯೋಗಗಳು ಶಿಫಾರಸು ಮಾಡಿದರೂ ಕಾನೂನಿನ ಪ್ರಕಾರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!