ಜಮಾಲ್ ಖಶೋಗಿ ಹತ್ಯೆ ಪ್ರಕರಣ: ಸೌದಿ ರಾಜಕುಮಾರನ ವಿರುದ್ಧದ ಪ್ರಕರಣ ಕೈಬಿಟ್ಟ ಅಮೆರಿಕ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
2018ರಲ್ಲಿ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಪ್ರಕರಣದಲ್ಲಿ ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ವಿರುದ್ಧದ ಮೊಕದ್ದಮೆಯನ್ನು ಅಮೆರಿಕ ನ್ಯಾಯಾಧೀಶರು ವಜಾಗೊಳಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಸೌದಿ ಅರೇಬಿಯಾದ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿರುವ ಪ್ರಿನ್ಸ್ ಮೊಹಮ್ಮದ್ ಅವರು ವಿದೇಶಿ ರಾಷ್ಟ್ರದ ಮುಖ್ಯಸ್ಥರಾಗಿ ಅಮೆರಿಕ ನ್ಯಾಯಾಲಯಗಳಲ್ಲಿ ವಿನಾಯಿತಿ ಹೊಂದಿದ್ದಾರೆ ಎಂಬ ಅಮೆರಿಕ ಸರ್ಕಾರದ ನಿಲುವನ್ನು ವಾಷಿಂಗ್ಟನ್ ಫೆಡರಲ್ ನ್ಯಾಯಾಧೀಶ ಜಾನ್ ಬೇಟ್ಸ್ ಒಪ್ಪಿಕೊಂಡರು.
ಖಶೋಗ್ಗಿ ಅವರ ಪತ್ನಿ ಹ್ಯಾಟಿಸ್ ಸೆಂಗಿಜ್ ಮತ್ತು ಡವ್ನ್ ಕಾರ್ಯಕರ್ತ ಗುಂಪು ಖುಶೋಗಿ ಕೊಲೆಯ ಹಿಂದೆ ಪ್ರಿನ್ಸ್ ಮೊಹಮ್ಮದ್ ಅವರ ಬಲವಾದ ಕೈವಾಡವಿದೆ ಎಂದು ಮುಖದ್ದಮೆ ಸಲ್ಲಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!