ನಾಯಕ ಧವನ್ ಆಕರ್ಷಕ ಆಟ: ವೆಸ್ಟ್​ ಇಂಡೀಸ್ ಗೆಲುವಿಗೆ 309 ರನ್ ಟಾರ್ಗೆಟ್ ಕೊಟ್ಟ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆತಿಥೇಯ ವೆಸ್ಟ್​ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್ ಗೆ 308 ರನ್ ಗಳಿಸಿದೆ . ಈ ಮೂಲಕ 309  ರನ್ ಗಳ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಬ್ಯಾಟಿಂಗ್ ಇಳಿದ ಭಾರತಕ್ಕೆ ಆರಂಭಿಕರಾಗಿ ಶಿಖರ್ ಧವನ್ ಹಾಗೂ ಯಂಗ್ ಪ್ಲೇಯರ್​ ಶುಭ್ಮನ್ ಗಿಲ್​ ಉತ್ತಮ ಜೊತೆಯಾಟ ನೀಡಿದರು. ಈ ವೇಳೆ ಗಿಲ್​ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದರು. ಜೊತೆಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ ಮೂರು ವರ್ಷಗಳ ನಂತರ ಅರ್ಧಶತಕ ಸಿಡಿಸಿದರು.

ನಾಯಕನ ಜವಾಬ್ದಾರಿ ಹೊತ್ತುಕೊಂಡು ಉತ್ತಮವಾಗಿ ಬ್ಯಾಟ್ ಬೀಸಿದ ಶಿಖರ್ ಧವನ್​​ 97ರನ್​​ಗಳಿಕೆ ಮಾಡಿ, ವಿಕೆಟ್ ಓಪ್ಪಿಸಿದರು. ತಾವು ಎದುರಿಸಿದ 99 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 97ರನ್​ಗಳಿಸಿ ಬ್ರೋಕ್ಸ್​ ಓವರ್​​ನಲ್ಲಿ ಔಟಾದರು.
ಗಿಲ್ ಬಳಿಕ ಬ್ಯಾಟಿಂಗ್ ಬಂದ ಅಯ್ಯರ್ ಉತ್ತಮವಾಡುವ ಮೂಲಕ ಅರ್ಧ ಶತಕ ಸಿಡಿಸಿದರು.

ಇದಾದ ಬಳಿಕ ಬಂದ ಸೂರ್ಯಕುಮಾರ್ ಯಾದವ್​, ಸಂಜು ಸ್ಯಾಮ್ಸನ್​ ಉತ್ತಮ ರನ್ ಗಳಿಸಲು ವಿಫಲರಾದರು. ಬಳಿಕ ಬ್ಯಾಟಿಂಗ್ ಬಂದ ದೀಪಕ್ ಹೂಡಾ, ಅಕ್ಸರ್ ಪಟೇಲ್​ ತಂಡದ ಮೊತ್ತವನ್ನು 300 ರ ಗಡಿ ದಾಟಿಸುವಲ್ಲಿ ಯಶಸ್ಸಿಯಾದರು. ಅಂತಿಮವಾಗಿ ಭಾರತ ವಿಕೆಟ್ 7 ಕಳೆದುಕೊಂಡು 308 ರನ್ ಗಳಿಸಿತು.

ವೆಸ್ಟ್ ಇಂಡೀಸ್​​ ಪರ ಗುಡಕೇಶ್​ ಮೋಟಿ, ಲ್ಜಾರಿ ಜೋಸೆಫ್​ ಎರಡು ವಿಕೆಟ್ ಪಡೆದರೆ, ರೊಮಾರಿಯಾ ಶೆಫರ್ಡ್​ ಮತ್ತು ಅಕೆಲ್​ ಹೊಸೈನ್​ ಒಂದು ವಿಕೆಟ್ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!