ಮತ್ತೆ ಕೈ ಕೊಟ್ಟ ಕೊಹ್ಲಿ: ಹೀಗಾದರೆ ವಿಶ್ವಕಪ್ ಗೆ ​ ಕಷ್ಟ…ಕಷ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಎರಡೂವರೆ ವರ್ಷಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ವಿರಾಟ್​ ಕೊಹ್ಲಿ ಮತ್ತೆ ಎಡವಿದ್ದು, ಬರೋಬ್ಬರಿ 5 ತಿಂಗಳ ಬಳಿಕ ಟಿ-20 ಕ್ರಿಕೆಟ್ ತಂಡಕ್ಕೆ ಮರಳಿದ್ದ ಕೊಹ್ಲಿ ಬ್ಯಾಟಿಂಗ್ ನಿಂದ ಯಾವುದೇ ಆಕರ್ಷಣೀಯ ಸ್ಕೋರ್ ಬಂದಿಲ್ಲ.
ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಕೇವಲ 1ರನ್​ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ್ದಾರೆ. ಮೊದಲ ಟಿ-20 ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ವಿರಾಟ್​ ಕೊಹ್ಲಿ, ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ದೀಪಕ್ ಹೂಡಾ ಅವರನ್ನ ಹೊರಗಿಟ್ಟು ಅನುಭವಿ ವಿರಾಟ್​ಗೆ ಕಣಕ್ಕಿಳಿಸಲಾಗಿತ್ತು. ಈ ಪಂದ್ಯದಲ್ಲಿ ಅವರ ಬ್ಯಾಟ್​ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಏನು ಮೂಡಿ ಬಂದಿಲ್ಲ. ಹೀಗಾಗಿ, ಮತ್ತೊಮ್ಮೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಇದೀಗ ಟಿ-20 ವಿಶ್ವಕಪ್​ಗೆ ಬಲಿಷ್ಠ ಪ್ಲೇಯಿಂಗ್ XI ತಂಡ ಕಟ್ಟುವ ಇರಾದೆ ಹೊಂದಿರುವ ಟೀಂ ಇಂಡಿಯಾಗೆ ವಿರಾಟ್​ ಕೊಹ್ಲಿ ಫಾರ್ಮ್ ಹೆಚ್ಚಿನ ತಲೆನೋವಾಗಿದೆ. ಇವರನ್ನ ತಂಡದಿಂದ ಹೊರಗಿಟ್ಟು, ಯುವ ಪ್ಲೇಯರ್ಸ್​ಗೆ ಚಾನ್ಸ್ ನೀಡಬೇಕಾ ಅಥವಾ ಇವರನ್ನೇ ತಂಡದಲ್ಲಿ ಮುಂದುವರೆಸಬೇಕಾ ಎಂಬ ಗೊಂದಲದಲ್ಲಿ ಆಯ್ಕೆ ಸಮಿತಿ ಇದೆ.

ಟೀಂ ಇಂಡಿಯಾದಲ್ಲಿ ಸೂರ್ಯಕುಮಾರ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್​, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್​ರಂತಹ ಪ್ಲೇಯರ್ ಇರುವ ಕಾರಣ, ಕೊಹ್ಲಿ ಸ್ಥಾನ ಉಳಿಸಿಕೊಳ್ಳುವುದು ತುಂಬಾ ಮಹತ್ವ ಪಡೆದುಕೊಂಡಿದೆ.
ಅತ್ಯುತ್ತಮ ಫಾರ್ಮ್​ನಲ್ಲಿದ್ದ ದೀಪಕ್ ಹೂಡಾಗೆ ಹೊರಗಿಟ್ಟು, ವಿರಾಟ್​ ಕೊಹ್ಲಿಗೆ ಚಾನ್ಸ್ ನೀಡುವ ಮೂಲಕ ತಂಡ ಕೈಸುಟ್ಟುಕೊಂಡಿದ್ದು, ಈ ವಿಷಯವನ್ನಿಟ್ಟುಕೊಂಡು ಅನೇಕರು ಕೊಹ್ಲಿಯನ್ನ ಟ್ರೋಲ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!