ಇಂಗ್ಲೆಂಡ್ ಗೆಲುವಿಗೆ 171 ರನ್​ ಟಾರ್ಗೆಟ್ ನೀಡಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ 8ವಿಕೆಟ್ ಕಳೆದಕೊಂಡ ಟೀಂ ಇಂಡಿಯಾ 170ರನ್​ಗಳಿಕೆ ಮಾಡಿದ್ದು, ಇಂಗ್ಲೆಂಡ್​ ಗೆಲುವಿಗೆ 171ರನ್​​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ(31) ಗ್ಲೀಸನ್ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ವಿರಾಟ್​ ಕೊಹ್ಲಿ(1) ಗ್ಲೀಸನ್ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರೆ, ನಂತರದ ಎಸೆತದಲ್ಲೇ ಪಂತ್​(26) ಗ್ಲೀಸನ್​ ಓವರ್​​ನಲ್ಲಿ ಕ್ಯಾಚ್ ನೀಡಿದರು.
ಸೂರ್ಯಕುಮಾರ್ ಯಾದವ್​(15), ಪಾಂಡ್ಯಾ(12), ಕಾರ್ತಿಕ್​(12) ವಿಕೆಟ್ ಒಪ್ಪಿಸಿದರು. ಆದರೆ, ಏಕಾಂಗಿಯಾಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾ 46ರನ್​ಗಳಿಕೆ ಮಾಡಿ ಅಜೇಯರಾಗಿ ಉಳಿದರು. ಇವರಿಗೆ ಹರ್ಷಲ್ ಪಟೇಲ್(12) ಸಾಥ್ ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!