ಯಕ್ಷಗಾನ ವೇಷ ಧರಿಸಿ ಬಹುದಿನದ ಕನಸನ್ನು ನನಸಾಗಿಸಿಕೊಂಡ ನಟ ರಮೇಶ್ ಅರವಿಂದ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ ಅವರು ಬುಧವಾರ ಯಕ್ಷಗಾನ ವೇಷ ಧರಿಸಿ, ಹೆಜ್ಜೆ ಹಾಕುವುದರ ಮೂಲಕ ತಮ್ಮ ಬಹು ದಿನದ ಕನಸನ್ನು ನನಸಾಗಿಸಿ ಕೊಂಡಿದ್ದಾರೆ.

ಸಾಮಾನ್ಯವಾಗಿ ಸಿನೆಮಾದಲ್ಲಿ ಟೇಕ್ ಗಳನ್ನು ಹೆಚ್ಚಿನ ನಟ/ನಟಿಯರು, ಕಲಾವಿದರು ಪಡೆದುಕೊಳ್ಳುತ್ತಾರೆ. ಆದರೆ ಯಕ್ಷಗಾನದಲ್ಲಿ ಹಾಗಿಲ್ಲ. ಇಲ್ಲಿ ಒಂದು ಬಾರಿ ರಂಗಸ್ಥಳ ಪ್ರವೇಶಿಸಿದ ಕಲಾವಿದ ಕುಣಿಯಲೇ ಬೇಕು, ಆತನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಲೇಬೇಕು. ಯಕ್ಷಗಾನ ಪ್ರಸ್ತುತಿಯನ್ನು ರಮೇಶ್ ಅರವಿಂದ್ ಸಿಂಗಲ್ ಟೇಕ್ ಅಲ್ಲಿ ಮಾಡುವುದರೊಂದಿಗೆ ಯಕ್ಷಗಾನದ ಹೆಜ್ಜೆ ಕಲಿಸಿದವರಿಗೆ ಆಶ್ಚರ್ಯ ಉಂಟು ಮಾಡಿದ್ದಾರೆ.

ಸದ್ಯ ಉಡುಪಿ ಪ್ರವಾಸದಲ್ಲಿ ರಮೇಶ್ ಇದ್ದಾರೆ. ಇಲ್ಲಿನ ಕೂದ್ರು ನೆಸ್ಟ್ ಗೆಸ್ಟ್ ಹೌಸಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಯಕ್ಷಗಾನದ ವೇಷವನ್ನು ಹಾಕಿಸಿಕೊಂಡಿದ್ದಾರೆ.

ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಪೋಕಸ್ ರಾಘು ಅವರ ಛಾಯಚಿತ್ರಗಾರಿಕೆಯ ಕಲೆಯನ್ನು ಕಂಡು ತನಗೂ ಫೋಟೊ ಶೂಟ್ ಮಾಡುವಿರಾ ಎಂದು ಕೇಳಿದ್ದಾರೆ. ಅದರ ಫಲವಾಗಿ ಕರಾವಳಿಯ ಯಕ್ಷಗಾನ ವೇಷವನ್ನು ಧರಿಸಿ ಪೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.

ಯಕ್ಷಗಾನದ ವೇಷ ತೊಟ್ಟ ನನ್ನಲ್ಲೀಗ ದಿವ್ಯತೆಯ ಭಾವ ಬೆಳೆದಿದೆ. ಎಂಟಡಿ, ನೂರೈವತ್ತು ಕೆ.ಜಿ ಬೆಳೆದವನಂತೆ ಅನಿಸುತ್ತಿದೆ. ನಾನಿವತ್ತು ಬಹಳವೇ ಶಕ್ತಿ ಶಾಲಿ, ಎದುರಿಗೇನಾದರೂ ರಾಕ್ಷಸರು ಬಂದರೆ ಹೊಡೆದುರುಳಿಸಿ ಬಿಡುತ್ತೇನೆ ಎಂದು ಅನುಭವವನ್ನು ರಮೇಶ್ ಅರವಿಂದ್ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!