ಯಾರು ಏರಲಿದ್ದಾರೆ ಬ್ರಿಟನ್ ಗದ್ದುಗೆಗೆ: ಹೊಸ ಪ್ರಧಾನಿ ಘೋಷಣೆಗೆ ದಿನಗಣನೆ ಆರಂಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಈಗಾಗಲೇ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ್ದು, ಇದೀಗ ತೆರವಾಗಿರುವಸ್ಥಾನಕ್ಕೆ ಕನ್ಸರ್ವೇಟಿವ್ ಪಕ್ಷವು ಹೊಸ ಅಭ್ಯರ್ಥಿಯನ್ನು ಸೆಪ್ಟೆಂಬರ್ 5 ರಂದು ಘೋಷಿಸಲಿದೆ.

ಇತ್ತ ಭಾರತ ಮೂಲದ ಮಾಜಿ ಹಣಕಾಸು ಸಚಿವ ರಿಷಿ ಸುನಾಕ್​ ಹಾಗೂ ವಿದೇಶಾಂಗ ಕಾರ್ಯದರ್ಶಿ ಲಿಜ್​ ಟ್ರಸ್​ ಸೇರಿದಂತೆ 11 ಅಭ್ಯರ್ಥಿಗಳು ಸದ್ಯ ಕಣದಲ್ಲಿದ್ದಾರೆ.

ಸೆ. 5ರಂದು ಚುನಾಯಿತ ಮತ್ತು ಹೊಸ ನಾಯಕನನ್ನು ನಾವು ಘೋಷಿಸಲೇಬೇಕು. ಹಾಗಾಗಿ ಚುನಾವಣೆ ಪ್ರಕ್ರಿಯೆ ಸೇರಿದಂತೆ ಎಲ್ಲಾ ಹಂತಗಳನ್ನು ಸಾಧ್ಯವಾದಷ್ಟು ಸುಗಮ, ತ್ವರಿತವಾಗಿ, ಸ್ವಚ್ಛವಾಗಿ ನಿರ್ವಹಿಸಬೇಕು ಎಂದು ತೀರ್ಮಾನಿಸಿದ್ದೇವೆ ಎಂದು ಸಮಿತಿಯ ಅಧ್ಯಕ್ಷ ಸರ್​ ಗ್ರಹಾಂ ಬ್ರಾಡಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!